ಉತ್ತರಪ್ರದೇಶ: ಸೊಸೆ ತನ್ನ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರಪ್ರದೇಶದ ನೆಹತಾರ್ನಲ್ಲಿ ನಡೆದಿದೆ.
ಸೊಸೆ ಸಂಗೀತಾ ಜೈನ್, ತನ್ನ ಅತ್ತೆ ರಾಜ್ರಾಣಿಗೆ ಕಲ್ಲಿನಿಂದ ತಲೆಗೆ ಹೊಡೆದಿದ್ದಲ್ಲದೇ, ವೇಲಿನಿಂದ ಆಕೆಯ ಕುತ್ತಿಗೆಗೆ ಬಿಗಿದು ಹತ್ಯೆಗೆ ಯತ್ನಿಸಿದ್ದಾಳೆ. ಅಲ್ಲದೇ, ವಿದ್ಯುತ್ ಶಾಕ್ ನೀಡಿ ಸ್ಟೋವ್ನಿಂದ ಸುಡಲು ಯತ್ನಿಸಿದ್ದಾಳೆ. ಈ ಎಲ್ಲ ದೃಶ್ಯಗಳು ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಸಂಬಂಧ ಸ್ಥಳೀಯ ಪೊಲೀಸರು ಸೊಸೆಯನ್ನು ಬಂಧಿಸಿದ್ದಾರೆ.