ತಮಿಳುನಾಡು: ಖ್ಯಾತ ಪೊಂಗಲ್ ಗ್ರಾಮೀಣ ಆಟ ಜಲ್ಲಿಕಟ್ಟುಗೆ ಸುಪ್ರೀಮ್ ಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ತಡೆ ನೀಡಿದ ನ್ಯಾಯಾಲಯ, ಮುಂದಿನ ಆದೇಶ ಬರುವರೆಗೆ ಜಲ್ಲಿಕಟ್ಟು ನಡೆಸದಂತೆ ನಿರ್ಭಂಧಿಸಿದೆ. ಪ್ರಾಣಿ ಸಂರಕ್ಷಣಾ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಂತರ ಈ ಆದೇಶವನ್ನು ಸರ್ವೋಚ್ಛ ನ್ಯಾಯಾಲಯ ಹೊರಡಿಸಿದೆ.
ತಮಿಳುನಾಡು ಸೇರಿದಂತೆ ದೇಶಾದ್ಯಂತ ಜಲ್ಲಿಕಟ್ಟು ಹಾಗೂ ಕಂಬಳ ಕ್ರೀಡೆ ಮೇಲಿದ್ದ ನಿಷೇಧವನ್ನು ಕೇಂದ್ರ ಪರಿಸರ ಇಲಾಖೆ ರದ್ದುಗೊಳಿಸಿತ್ತು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿಷೇಧ ರದ್ದು ನಿರ್ಧಾರ ಪ್ರಶ್ನಿಸಿ ಹಲವು ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.