ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ ನೀರ್ಗಲ್ಲು ಪ್ರದೇಶದಲ್ಲಿ ಭಾರಿ ಹಿಮಪಾತವಾಗಿದ್ದು, ಭಾರತೀಯ ಯೋಧರು ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.
ಸಮುದ್ರ ಮಟ್ಟದಿಂದ 19 ಸಾವಿರ ಅಡಿ ಮೇಲಿರುವ ಲಡಾಖ್ ಪ್ರದೇಶದ ಉತ್ತರ ನೀರ್ಗಲ್ಲು ಪ್ರದೇಶದಲ್ಲಿ ಬುಧವಾರ ನಸುಕಿನಲ್ಲಿ ಹಿಮವರ್ಷಧಾರೆ ಆಗಿದೆ. ಈ ವೇಳೆ ಅಲ್ಲಿ ಕರ್ತವ್ಯದ ಮೇಲಿದ್ದ 10 ಯೋಧರು ಹಿಮದಡಿ ಸಿಲುಕಿದ್ದಾರೆ ಎಂದು ಕರ್ನಲ್ ಎಸ್.ಡಿ ಗೋಸ್ವಾಮಿ ತಿಳಿಸಿದ್ದಾರೆ.
ಸಿಯಾಚಿನ್ ಪ್ರದೇಶವು ವಿಶ್ವದ ಅತಿ ಎತ್ತರದ ಯುದ್ಧಭೂಮಿ. ಇಲ್ಲಿ ಚಳಿಗಾಲದಲ್ಲಿ ಒಂದು ಹಂತದಲ್ಲಿ ಮೈನಸ್ 60 ಡಿಗ್ರಿವರೆಗೂ ಉಷ್ಣಾಂಶ ಕುಸಿಯುತ್ತದೆ. ಇಂಥ ಪರಿಸ್ಥಿತಿಯಲ್ಲಿ ಯೋಧರು ಅಲ್ಲಿ ಕೆಲಸ ಮಾಡುವುದೇ ಒಂದು ದೊಡ್ಡ ಸವಾಲಿನ ಕೆಲಸ.