News Kannada
Tuesday, July 05 2022

ದೇಶ-ವಿದೇಶ

ವಿಮಾನದಲ್ಲಿ ಸೋನುನಿಗಮ್ ಹಾಡು: ಐವರು ಗಗನಸಖಿಯರ ಅಮಾನತು - 1 min read

Photo Credit :

ವಿಮಾನದಲ್ಲಿ ಸೋನುನಿಗಮ್ ಹಾಡು: ಐವರು ಗಗನಸಖಿಯರ ಅಮಾನತು

ಹೊಸದಿಲ್ಲಿ: ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ವಿಮಾನದಲ್ಲಿ ಹಾಡು ಹಾಡಲು ಮೈಕ್ ಒದಗಿಸಿದ್ದಕ್ಕೆ ಐದು ಮಂದಿ ಗಗನ ಸಖಿಯರನ್ನು ಅಮಾನತುಗೊಳಿಸಲಾಗಿದೆ.

ಜನವರಿ 4ರಂದು ಜೋದಪುರದಿಂದ ಮುಂಬೈಗೆ ಸೋನು ನಿಗಮ್‌ ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದ ಸಹಪ್ರಯಾಣಿಕರು ಅವರು ಹಾಡುವಂತೆ ಒತ್ತಾಯಿಸಿದರು. ಅಭಿಮಾನದ ಕೋರಿಕೆಗೆ ಮಣಿದ ಸೋನು, ವೀರ್‌ ಜರಾ ಚಿತ್ರದ ದೋ ಪಲ್‌ ರುಖಾ ಮತ್ತು ರೆಫ್ಯುಜಿ ಚಿತ್ರದ ಪಂಚಿ ನದಿಯಾ ಗೀತೆಗಳನ್ನು ಹಾಡಿದರು.

ಸೋನು ಎದ್ದುಬಂದು ಅರ್ಡೆಸಿಂಗ್‌ ಸಿಸ್ಟಮ್‌ ಮೈಕ್‌ ಹಿಡಿದು ಹಾಡಿದ್ದು, ಹಾಡಿಗೆ ಮರುಳಾದ ಅಭಿಮಾನಿ ಪ್ರಯಾಣಿಕರು ಎದ್ದು ನಿಂತು ಸೋನು ದನಿಗೆ ದನಿಗೂಡಿಸಿದ್ದು, ಹೆಚ್ಚಿನ ಪ್ರಯಾಣಿಕರು ಆಸನದಿಂದ ಎದ್ದು ಹಾಡಿಗೆ ಹೆಜ್ಜೆ ಹಾಕಿದ್ದು – ಇವೆಲ್ಲವೂ ವಿಮಾನ ಪ್ರಯಾಣಕ್ಕೆ ಅಪಾಯ ತಂದೊಡ್ಡುವ ಅಂಶಗಳು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೇಳಿದೆ. ಈ ಗಾಯನಕೂಟದ ವಿಡಿಯೋಗಳು ಅಂತರ್ಜಾದಲ್ಲಿ ಹರಿದಾಡಿದಾಗ ಡಿಜಿಸಿಎ ವಿಮಾನ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ಇಂದು ಐವರು ಗಗನ ಸಖಿಯರನ್ನು ಜೆಟ್ ಏರ್ ವೇಸ್ ಅಮಾನತು ಮಾಡಿತ್ತು.

ಗಾಯಕ ಸೋನು ನಿಗಮ್ ಗೆ ವಿಮಾನದಲ್ಲಿ ಹಾಡಲು ವಿಮಾನದ ಮೈಕ್ ನೀಡಿದ ಪ್ರಕರಣದ ವಿರುದ್ಧ ಈ ಹಿಂದೆ ಡಿಜಿಸಿಎ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಜೆಟ್ ಏರ್ ವೇಸ್ ಸಂಸ್ಥೆ ತನ್ನ ಐವರು ಗಗನ ಸಖಿಯರನ್ನು ಅಮಾನತು ಮಾಡಿತ್ತು. ಇದೀಗ ಜೆಟ್ ಏರ್ ವೇಸ್ ಕ್ರಮವನ್ನು ಗಾಯಕ ಸೋನು ನಿಗಮ್ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೋನು ನಿಗಮ್, ನಾನು ವಿಮಾನಗಳಲ್ಲಿ ಸಾಕಷ್ಟು ಫಾಷನ್ ಶೋ, ಕಿರು ಗಾಯನ ಕೂಟಗಳನ್ನು ನೋಡಿದ್ದೇನೆ. ಪೈಲಟ್​ಗಳು ಮತ್ತು ಸಿಬ್ಬಂದಿಗಳು ಬೇರೆ ರಾಷ್ಟ್ರಗಳಲ್ಲಿ ಜೋಕ್ ಹಾರಿಸುವುದನ್ನು ಕಂಡಿದ್ದೇನೆ. ಅಲ್ಲಿ ಎಲ್ಲೂ ಅಸಹನೆಯನ್ನು ನೋಡಿಲ್ಲ. ಪ್ರಕಟಣೆಗಳನ್ನು ಮಾಡಿದ ಬಳಿಕ ವಿಮಾನದ ಮೈಕ್ ಖಾಲಿ ಇದ್ದಾಗ ನನ್ನಲ್ಲಿ ಹಾಡಲು ಹೇಳಿದ ಗಗನಸಖಿಯರನ್ನು ಅಮಾನುತು ಮಾಡಲಾಗಿದೆ.

See also  ಕೊರೋನ ಸಂದಿಗ್ದ ಸಮಯದಲ್ಲಿ ಸದ್ದಿಲ್ಲದೆ ಜನಸೇವೆ ಮಾಡುತ್ತಿರುವ ಕೊಡಗಿನ ಅಬ್ದುಲ್ ಲತೀಫ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು