News Kannada
Friday, July 01 2022

ದೇಶ-ವಿದೇಶ

ನಾವು ಯಾವುದೇ ಬಗೆಯ ದೇಶ ವಿರೋಧಿ ಕೃತ್ಯಗಳನ್ನು ಎಸಗಿಲ್ಲ: ಜೆಎನ್ ಯು ವಿದ್ಯಾರ್ಥಿಗಳು - 1 min read

Photo Credit :

ನಾವು ಯಾವುದೇ ಬಗೆಯ ದೇಶ ವಿರೋಧಿ ಕೃತ್ಯಗಳನ್ನು ಎಸಗಿಲ್ಲ: ಜೆಎನ್ ಯು ವಿದ್ಯಾರ್ಥಿಗಳು

ಹೊಸದಿಲ್ಲಿ : ಉಮರ್‌ ಖಾಲಿದ್‌ ಸಹಿತ ದೇಶದ್ರೋಹದ ಆರೋಪಕ್ಕೆ ಗುರಿಯಾಗಿ ಭೂಗತರಾಗಿದ್ದ ಐವರು ಜೆಎನ್‌ಯು ವಿದ್ಯಾರ್ಥಿಗಳು ನಿನ್ನೆ ಭಾನುವಾರ ರಾತ್ರಿ ವಿವಿ ಕ್ಯಾಂಪಸ್‌ಗೆ ವಾಪಸ್ ಆಗಿದ್ದಾರೆ.

“We were framed” say JNU students who were accused for sedition-1
“ನಾವು ಭೂಗತರಾದದ್ದು ಪೊಲೀಸರಿಗೆ ಹೆದರಿಕೊಂಡು ಅಲ್ಲ; ಬದಲು ಉದ್ರಿಕ್ತ ಜನರ ಗುಂಪು ನಮ್ಮನ್ನು ಚಚ್ಚಿ ಸಾಯಿಸಬಹುದೆಂಬ ಭಯದಲ್ಲಿ . ನಾವು ಯಾವುದೇ ಬಗೆಯ ದೇಶ ವಿರೋಧಿ ಕೃತ್ಯಗಳನ್ನು ಎಸಗಿಲ್ಲ; ಸೃಷ್ಟಿಸಲ್ಪಟ್ಟ ವಿಡಿಯೋ ಮೂಲಕ ನಮ್ಮನ್ನು ಕಾನೂನಿನ ಪ್ರಕಾರ ಸಿಕ್ಕಿಸಿ ಹಾಕುವ ಹುನ್ನಾರ ನಡೆದಿತ್ತು’ ಎಂದು ಈ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಈ ಐವರು ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ನಿನ್ನೆ ತಡ ರಾತ್ರಿ ಪ್ರತ್ಯಕ್ಷರಾದ ಸುದ್ದಿ ತಿಳಿದೊಡನೆಯೇ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಧಾವಿಸಿ ಬಂದಿದ್ದಾರೆ. “ನಾವು ಪೊಲೀಸರಿಗೆ ಶರಣಾಗುವುದಿಲ್ಲ ; ಬೇಕಿದ್ದರೆ ಪೊಲೀಸರು ನಮ್ಮನ್ನು ಬಂಧಿಸಿ ಒಯ್ಯಲಿ’ ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ.

ಘಟನೆಯಲ್ಲಿ ಮುಖ್ಯವಾಗಿ ಉಮರ್ ಖಾಲಿದ್ ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಹೆಸರು ವಿವಾದದೊಂದಿಗೆ ತಳುಕು ಹಾಕಿಕೊಂಡಿತ್ತು. ಉಮರ್ ಖಾಲಿದ್ ತಲೆಮರೆಸಿಕೊಂಡು ಸುದ್ದಿಯಾಗಿದ್ದರೆ, ಕನಯ್ಯಾ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಉಮರ್ ಖಾಲಿದ್, ಅನಂತ್ ಪ್ರಕಾಶ್ ನಾರಾಯಣ್, ಅಶುತೋಷ್ ಕುಮಾರ್, ರಾಮ ನಾಗ ಮತ್ತು ಅನಿರ್ಬನ್ ಭಟ್ಟಾಚಾರ್ಯ ಎಂಬೀ ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದರು. ಭಾನುವಾರ ವಿವಿಯ ಅಡ್ಮಿನಿಸ್ಟ್ರೇಷನ್ ಬ್ಲಾಕ್ ಬಳಿ ಸೇರಿದ ವಿದ್ಯಾರ್ಥಿಗಳ ಗುಂಪು ಈ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಘೋಷಣೆ ಕೂಗಿ ಕ್ಯಾಂಪಸ್‌ಗೆ ಬರ ಮಾಡಿಕೊಂಡಿತ್ತು.

ಕ್ಯಾಂಪಸ್‌ಗೆ ಮರಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಖಾಲಿದ್, ಕ್ಯಾಂಪಸ್‌ನಲ್ಲಿ ಕಳೆದ 7 ವರ್ಷಗಳಿಂದ ಇದ್ದೀನಿ. ಇಲ್ಲಿಯವರೆಗೆ ನಾನೊಬ್ಬ ಮುಸ್ಲಿಂ ಎಂಬ ಭಾವನೆ ನನ್ನಲ್ಲಿ ಬಂದಿರಲಿಲ್ಲ. ಆದರೆ ಕಳೆದ 10 ದಿನಗಳಲ್ಲಿ ನಾನೊಬ್ಬ ಮುಸ್ಲಿಂ ಆಗಿದ್ದೆ ಎಂಬ ಅನುಭವ ನನಗಾಗಿದೆ. ನಾನು ಉಮರ್ ಖಾಲಿದ್, ನಾನೊಬ್ಬ ಉಗ್ರನಲ್ಲ ಎಂದು ಹೇಳಿದ ಖಾಲಿದ್, ತನ್ನನ್ನು ಉಗ್ರನೆಂದು ಬಿಂಬಿಸಿದ ಮಾಧ್ಯಮಗಳನ್ನು ಖಂಡಿಸಿದ್ದಾರೆ.
ಫೆ. 9ರಂದು  ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪೊಲೀಸರು ವಿಶ್ವ ವಿದ್ಯಾನಿಲಯದ ಮೇಲೆ ದಾಳಿ ಮಾಡಿಲ್ಲ, ಬದಲಾಗಿ ಸರ್ಕಾರಕ್ಕೆ ನಮ್ಮ ಮೇಲೆ ದಾಳಿ ಮಾಡಲು ಒಂದು ನೆಪ ಬೇಕಿತ್ತು ಎಂದು ಖಾಲಿದ್ ಹೇಳಿದ್ದಾರೆ.

ಮಾಧ್ಯಮಗಳು ನನ್ನ ಬಗ್ಗೆ ಸಿಕ್ಕಾಪಟ್ಟೆ ಬರೆದಿವೆ. ಈ ಹೊತ್ತಲ್ಲಿ ನನ್ನ ಕುಟುಂಬ ಇದನ್ನೆಲ್ಲಾ ಹೇಗೆ ಸಹಿಸಿಕೊಂಡು ಹೋಗುತ್ತಿದೆ ಎಂಬುದು ನನಗೊಬ್ಬನಿಗೇ ಗೊತ್ತು. ಕಾರ್ಯಕ್ರಮಕ್ಕೆ ಮುನ್ನ ಗಲ್ಫ್ ಅಥವಾ ಕಾಶ್ಮೀರಕ್ಕೆ ನಾನು 800 ಕರೆ ಮಾಡಿದ್ದೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ ಖಾಲಿದ್.

See also  ಬಾರಾಮುಲ್ಲಾದಲ್ಲಿ ಸೇನೆಯಿಂದ ಹತ್ಯೆಯಾದ ಉಗ್ರರಲ್ಲಿ ಒಬ್ಬ ಪಾಕಿಸ್ತಾನದ ಫುಟ್ಬಾಲ್ ಆಟಗಾರ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು