ಛತ್ತೀಸ್ ಗಡ: ಮೇಕೆಗಳನ್ನು ಮಾರಿ ತನ್ನ ಗ್ರಾಮದ ಜನತೆಗೆ ಶೌಚಾಲಯಗಳನ್ನು ನಿರ್ಮಿಸಿದ 104 ವರ್ಷದ ಮುದುಕಿ ಕನ್ವರ್ ವಾಯಿ ಅವರ ಸಾಧನೆಯನ್ನು ಮೆಚ್ಚಿದ ಪ್ರಧಾನಿ ಮೋದಿಯವರೇ ತಲೆದೂಗಿದರು.
ಧಮತಾರಿ ಜಿಲ್ಲೆಯ ಕೊಟಾಭರ್ರಿ ಹಳ್ಳಿಯಲ್ಲಿ ಶೌಚಾಯಲದ ಕೊರತೆಯಿತ್ತು. ಮೇಕೆಯನ್ನು ಮಾರಿ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಿ ಇತರರಿಗೂ ಸ್ಫೂರ್ತಿಯಾಗಿದ್ದಾರೆ ಕನ್ವರ್ ಬಾಯಿ. ಅಜ್ಜಿಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿ ಅಜ್ಜಿಯ ಪಾದ ಮುಟ್ಟಿ ನಮಸ್ಕರಿಸಿದರು.
ಇದು ಚೇಂಜಿಂಗ್ ಇಂಡಿಯಾದ ಸಂಕೇತವಾಗಿದೆ. ಗ್ರಾಮೀಣ ಪ್ರದೇಶದ ಈ ಅಜ್ಜಿ ಸ್ವಚ್ಚ ಭಾರತ್ ಅಭಿಯಾನದ ಕನಸನ್ನು ನನಸನ್ನಾಗಿ ಮಾಡಿಕೊಂಡಿದ್ದಾರೆ. ಈಕೆ ಎಲ್ಲರಿಗೂ ಮಾದರಿ. ಅದರಲ್ಲೂ ಮುಖ್ಯವಾಗಿ ಯುವ ಚೇತನಗಳಿಗೆ ಎಂದು ಮೋದಿ ಹೇಳಿದರು.
104 ವರ್ಷದ ಈ ಅಜ್ಜಿ ಟಿವಿಯನ್ನು ನೋಡೋದಿಲ್ಲ, ಪೇಪರ್ ಅನ್ನು ಓದೋದಿಲ್ಲ. ಆದರೆ ಸ್ವಚ್ಚ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸುವ ಸಂದೇಶ ಅದ್ಹೇಗೂ ಆಕೆಯ ಕಿವಿಗೆ ತಲುಪಿತ್ತು. ಕೊನೆಗೆ ಅಜ್ಜಿ ತನ್ನ ಮೇಕೆಗಳನ್ನೇ ಮಾರಿ ಶೌಚಾಲಯ ನಿರ್ಮಿಸಿಕೊಂಡಿದ್ದರು. ಅಷ್ಟೇ ಅಲ್ಲ ಗ್ರಾಮದ ಇತರರಿಗೂ ಸ್ಫೂರ್ತಿಯಾಗಿದ್ದಾರೆ.