ಕೋಲ್ಕತ್ತ: ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು 20ರ ಹರೆಯದ ತರುಣಿಯೋರ್ವಳು ಕಟ್ಟಡದಿಂದ ಜಿಗಿದ ಘಟನೆ ಇಲ್ಲಿಗೆ ಸಮೀಪದ ಲಿಲುವ ಎಂಬಲ್ಲಿ ಭಾನುವಾರ ನಡೆದಿದೆ.
ತರುಣಿಯು ತನ್ನ ಬಾಯ್ ಫ್ರೆಂಡ್ ನನ್ನು ಕಾಣಲು ಆತನಿದ್ದ ಕಟ್ಟಡಕ್ಕೆ ಬಂದಿದ್ದಳು. ಆತನ ಕೋಣೆಯಲ್ಲಿ ಆತನ ಇನ್ನಿಬ್ಬರು ಸ್ನೇಹಿತರು ಇದ್ದರು. ತರುಣಿಗೆ ಆಕೆಯ ಬಾಯ್ ಫ್ರೆಂಡ್ ಅಮಲು ಬೆರೆಸಿದ ಪಾನೀಯವನ್ನು ಕುಡಿಯಲು ಕೊಟ್ಟ. ಅದನ್ನು ಕುಡಿದ ಬಳಿಕ ಆಕೆಯ ಮೇಲೆ ಮೂವರೂ ಸೇರಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದರು. ಈ ಕಾಮುಕರಿಂದ ತಪ್ಪಿಸಿಕೊಂಡ ಯುವತಿ ಎರಡನೇ ಮಹಡಿಯಿಂದ ಹಾರಿದಳು. ಇದರಿಂದ ಯುವತಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವತಿಯು ಕಟ್ಟಡದಿಂದ ಕೆಳಕ್ಕೆ ಜಿಗಿಯುವುದನ್ನು ಕಂಡ ಅಕ್ಕ-ಪಕ್ಕದವರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಅತ್ಯಾಚಾರಕ್ಕೆ ಯತ್ನಿಸಿದ್ದ ಮೂರೂ ತರುಣರನ್ನು ಹಿಡಿದು ಬಳಿಕ ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.