News Kannada
Sunday, September 25 2022

ದೇಶ-ವಿದೇಶ

ದೇಶದ ಮೊದಲ ಮಹಿಳಾ ಬೈಕರ್ ಅಪಘಾತದಲ್ಲಿ ಸಾವು - 1 min read

Photo Credit :

ದೇಶದ ಮೊದಲ ಮಹಿಳಾ ಬೈಕರ್ ಅಪಘಾತದಲ್ಲಿ ಸಾವು

ಭೋಪಾಲ್: ದೇಶದ ಮೊದಲ ಮಹಿಳಾ ಬೈಕರ್ ಎಂದೇ ಖ್ಯಾತಿ ಗಳಿಸಿದ್ದ ವೀನು ಪಲಿವಾಲ್ ಅವರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.


ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ವೀನು ಪಲಿವಾಲ್ (44) ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ವೀನು ಅವರು ತಮ್ಮ ಹಾರ್ಲೆ ಡೇವಿಡ್ಸನ್ ಬೈಕಿನಲ್ಲಿ ದೇಶಾದ್ಯಂತ ಪ್ರವಾಸ ಹೊರಟಿದ್ದರು. ನಿನ್ನೆ ಲಕ್ನೋದಿಂದ ಭೋಪಾಲ್ ಗೆ ಪ್ರಯಾಣಿಸುತ್ತಿದ್ದ ವೇಳೆ ಅಪಾಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಜೈಪುರ ನಿವಾಸಿಯಾದ ವೀಣು, ತನ್ನ ಹರ್ಲೇ ಡೇವಿಡ್‌ಸನ್‌ ಮೋಟಾರ್‌ಸೈಕಲ್‌ನಲ್ಲಿ ದೇಶದ ತುಂಬೆಲ್ಲ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸದಲ್ಲಿ ಆಕೆಯ ಜೊತೆಗೆ ಮತ್ತೊಬ್ಬ ಬೈಕರ್ ದೀಪೇಶ್ ತನ್ವರ್ ಇದ್ದರು. ಭೋಪಾಲ್‌ನಿಂದ 100 ಕಿ.ಮೀ ದೂರದ ಗೈರಾಸ್‌ಪುರ್‌ನಲ್ಲಿ ವೀಣು ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಪಲಿವಾಲ್‌ರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ವಿದಿಶಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದರೆಂದು ವೈದ್ಯರು ತಿಳಿಸಿದ್ದಾರೆ.

See also  ಸೇನೆಯ ಬಹುದೂರ ಕ್ರಮಿಸಬಲ್ಲ ಎರಡು ರಾಕೆಟ್ ಗಳ ಪರೀಕ್ಷೆ ಸಫಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು