ನಭ: ಖಲಿಸ್ತಾನ್ ಲಿಬರೇಷನ್ ಫೋರ್ಸ್ನ(ಕೆ ಎಲ್ ಎಫ್) ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಜೊತೆಗೆ ಐವರು ಉಗ್ರರು ಪರಾರಿಯಾಗಿರುವ ಘಟನೆ ಭಾನುವಾರ ಬೆಳಗ್ಗೆ ಪಂಜಾಬ್ನ ನಭ ಜೈಲಿನಲ್ಲಿ ನಡೆದಿದೆ.
ಜೈಲಿನ ಮೇಲೆ ಶಸ್ತ್ರಾಸ್ತ್ರಧಾರಿಗಳ ಗುಂಪೊಂದು ದಾಳಿ ಮಾಡಿದೆ. ಸುಮಾರು 200 ಸುತ್ತು ಗುಂಡು ಹಾರಿಸಿದ 10 ಬಂದೂಕುದಾರಿಗಳು ಪೊಲೀಸರ ಸಮವಸ್ತ್ರ ಧರಿಸಿ ಬಂದಿದ್ದರು.
ಹರ್ಮಿಂದರ್ ಸಿಂಗ್ನನ್ನು 2014ರಲ್ಲಿ ಬಂಧಿಸಲಾಗಿದ್ದು, ಸಿಖ್ ದಂಗೆ ಸೇರಿದಂತೆ ಭಯೋತ್ಪಾದನಾ ಕೆಲಸಗಳಲ್ಲಿ ಭಾಗಿಯಾದ ಆರೋಪಿಯಾಗಿದ್ದಾನೆ.