ಹೊಸದಿಲ್ಲಿ: ಆರ್ ಬಿಐ ಹೊಸ ಅಧಿಸೂಚನೆ ಹೊರಡಿಸಿದ್ದು, ಇದರ ಅನ್ವಯ ಬ್ಯಾಂಕಿನಲ್ಲಿ ಹೊಸದಾಗಿ ಬಿಡುಗಡೆಯಾದ ಅಧಿಕ ಮೌಲ್ಯದ ನೋಟುಗಳನ್ನು ಠೇವಣಿಯಿಟ್ಟರೆ, ಠೇವಣಿಯಿಟ್ಟಷ್ಟೇ ಹಣವನ್ನು ಮತ್ತೆ ಪಡೆಯಬಹುದು ಎಂದು ಹೇಳಿದೆ.
ಆರ್ ಬಿಐ ತನ್ನ ನಿಯಮವನ್ನು ಸಡಿಲಿಸಿದ್ದು, ಅಧಿಕ ಮೌಲ್ಯದ ಹಳೆ ನೋಟುಗಳ ಚಲಾವಣೆ ನಿಷೇಧದ ನಂತರ, ಹಳೆ ನೋಟುಗಳನ್ನು ಠೇವಣಿ ಮಾಡಿದ್ದಲ್ಲಿ ಹಣ ಮತ್ತೆ ಪಡೆಯಲು ಸೀಮಿತತೆಯನ್ನು ಗ್ರಾಹಕರಿಗೆ ವಿಧಿಸಲಾಗಿತ್ತು. ಇದರಿಂದ ಹಲವರು ಠೇವಣಿಯಿಡಲು ಹಿಂದೇಟು ಹಾಕುತ್ತಿದ್ದರು. ಈ ಹಿನ್ನೆಲೆ ಆರ್ ಬಿ ಐ ತನ್ನ ನಿಯಮವನ್ನು ಬದಲಿಸಿದ್ದು, ಒಬ್ಬ ವ್ಯಕ್ತಿ ಒಂದಷ್ಟು ಹಣವನ್ನು ಇಂದಿನಿಂದ ಬ್ಯಾಂಕಿನಲ್ಲಿ ಠೇವಣಿಯಿಟ್ಟರೆ, ಅಧಿಕ ಮೌಲ್ಯದ ಹಳೆ ನೋಟುಗಳ ಚಲಾವಣೆ ಬಂದ್ ಗಿಂತ ಮುಂಚೆ ಖಾತೆಯಲ್ಲಿದ್ದಷ್ಟು ಹಣ ಹಿಂಪಡೆಯುತ್ತಿದ್ದಷ್ಟೇ ಇನ್ನು ಮುಂದೆಯೂ ಕೂಡ ಪಡೆಯಬಹುದು. ಅಂದರೆ 2000 ಮತ್ತು 500 ರೂಪಾಯಿ ಹೊಸದಾಗಿ ಬಂದಿರುವ ನೋಟುಗಳನ್ನು ಠೇವಣಿಮಾಡಿದರೆ ಅಷ್ಟೇ ಮೊತ್ತದ ಹಣವನ್ನು ಠೇವಣಿದಾರು ಪಡೆಯಬಹುದು.
ಹಳೆ ನೋಟುಗಳನ್ನು ಮತ್ತು ಹೊಸ ನೋಟುಗಳ ಹೂಡಿಕೆ ಮಾಡಿದ ಬಗ್ಗೆ ಪ್ರತ್ಯೇಕ ದಾಖಲೆಗಳನ್ನು ಬ್ಯಾಂಕ್ ಗಳು ಇಟ್ಟುಕೊಳ್ಳಬೇಕೆಂದು ನವೆಂಬರ್ 14ರಂದು ಆರ್ ಬಿಐ ಸೂಚನೆ ನೀಡಿದ್ದು, ಕರೆಂಟ್ ಅಕೌಂಟ್ ನಲ್ಲಿ ಪ್ರತಿನಿತ್ಯ ವ್ಯವಹಾರ ಮಾಡುವವರು ಹಣ ಠೇವಣಿಯಿಡುತ್ತಿದ್ದು, ಅವರು ಇನ್ನು ಮುಂದಕ್ಕೆ ಅಷ್ಟೇ ಹಣವನ್ನು ಪಡೆಯಬಹುದು ಹಾಗೂ ಇದಕ್ಕೆ ಬಡ್ಡಿ ಸಿಗುವುದಿಲ್ಲ ಎಂದು ಸುದ್ಧಿ ಮೂಲಗಳು ತಿಳಿಸಿದೆ.