ಕೊಲ್ಕೋತಾ: ಯೋಗ ಗುರು ಬಾಬಾ ರಾಮ್ ದೇವ್ ಅವರು ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಗಳಿವೆ ಎಂದಿದ್ದಾರೆ.
ನಿನ್ನೆ ಈ ಬಗ್ಗೆ ಮಾತನಾಡಿದ ಬಾಬಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಅವರ ಅರ್ಹತೆ ಬಗ್ಗೆ ರಾಜಕೀಯದಲ್ಲಿ ಪ್ರಶ್ನಿಸುವಂತಿಲ್ಲ. ಮಮತಾ ಅವರು ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿಯವರು ನೋಟು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ನಿಷೇಧ ಹೇರಿರುವ ರೀತಿಯ ಬಗ್ಗೆ ವಿರೋಧವೇ ಹೊರತು ನೋಟು ನಿಷೇಧ ನಿರ್ಧಾರದ ವಿರುದ್ಧ ಅಲ್ಲ ಮತ್ತು ಹೃದಯದಲ್ಲಿ ನೋಟು ನಿಷೇಧಕ್ಕೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಈ ಸಂದರ್ಭ ಬಾಬಾ ರಾಮ್ ದೇವ್ ತಿಳಿಸಿದರು.