ಕರಾಚಿ: ಪಾಕಿಸ್ತಾನದಲ್ಲಿ ಇಂದು(ಸೋಮವಾರ) ಭೀಕರ ಅಗ್ನಿ ದುರಂತ ಸಂಭವಿಸಿದ್ದು, 11 ಮಂದಿ ಸಜೀವ ದಹನವಾಗಿದ್ದಾರೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ಕರಾಚಿಯ ಶರಾ ಇ ಫೈಸಲ್ ಪ್ರದೇಶದಲ್ಲಿರುವ ಖಾಸಗಿ ತಾರಾ ಹೊಟೆಲ್ ರೀಜೆಂಟ್ ಪ್ಲಾಜಾದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಬೆಂಕಿ ಇಡೀ ಹೊಟೆಲ್ ಅನ್ನು ಆವರಿಸಿದೆ ಪರಿಣಾಮ ಹೊಟೆಲ್ ನಲ್ಲಿದ್ದ 11 ಮಂದಿ ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ.
15ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಬೆಂಕಿ ಕಾಣಿಸುತ್ತಿದ್ದಂತೆ ಕೊಠಡಿಯಲ್ಲಿದ್ದ ಹಲವು ವಿದೇಶಿಗರು ತಮ್ಮ ಬೆಡ್ ಶೀಟ್ ಗಳನ್ನು ಹೊದ್ದುಕೊಂಡು ಕಟ್ಟಡದಿಂದ ಕೆಳಗೆ ಧುಮುಕುತ್ತಿರವ ದೃಶ್ಯವನ್ನು ಅಲ್ಲಿನ ಸುದ್ದಿವಾಹಿನಿಯೊಂದು ಪ್ರಸಾರ ಮಾಡಿದೆ.