ಚೆನ್ನೈ: ಹೃದಯಘಾತಕ್ಕೊಳಕ್ಕಾಗಿ ಜೆ.ಜಯಲಲಿತಾ ಅವರು ಇಹಲೋಕ ತ್ಯಜಿಸಿರುವ ಹಿನ್ನಲೆಯಲ್ಲಿ ತಮಿಳುನಾಡಿನ ನೂತನ ಸಿಎಂ ಆಗಿ ಒ.ಪನ್ನೀರ್ ಸೆಲ್ವಂ ನಿನ್ನೆ ರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ತಮಿಳುನಾಡಿನ ರಾಜಭವನದಲ್ಲಿರುವ ರಾಜಾಜಿ ಹಾಲ್ ನಲ್ಲಿ ಸೋಮವಾರ ತಡರಾತ್ರಿ 1.20 ನಡೆದ ಸರಳ ಕಾರ್ಯಕ್ರಮದಲ್ಲಿ ಪನ್ನೀರ್ ಸೆಲ್ವಂ ಮತ್ತು 31 ನೂತನ ಸಚಿವರು ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಜಯಲಲಿತಾ ಅವರ ಆಪ್ತರಾಗಿದ್ದ ಪನ್ನೀರ್ ಸೆಲ್ವಂ ಅವರು ಈ ಹಿಂದೆಯೂ 2 ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇದೀಗ ಮೂರನೇ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು.
ಇದಕ್ಕೂ ಮೊದಲು ನಡೆದ ಎಐಎಡಿಎಂಕೆ ಶಾಸಕಾಂಗ ಸಭೆಯಲ್ಲಿ ಒ. ಪನ್ನೀರ್ ಸೆಲ್ವಂ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಮೂರನೃ ಬಾರಿ ತಮಿಳುನಾಡು ಸಿಎಂ ಆಗಿ ಆಯ್ಕೆಯಾದ ಪನ್ನೀರ್ ಸೆಲ್ವಂರವರಿಗೆ ತಮಿಳುನಾಡು ರಾಜ್ಯ ಉಸ್ತುವಾರಿ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರು ಪ್ರಮಾಣವಚನ ಬೋಧಿಸಿದರು.