ಅಲಹಾಬಾದ್: ತಲಾಕ್ ನಿಂದಾಗಿ ಮುಸ್ಲಿಂ ಮಹಿಳೆಯರ ಹಕ್ಕು ಉಲ್ಲಂಘನೆಯಾಗಲಿದ್ದು, ತ್ರಿವಳಿ ತಲಾಕ್ ಅಸಂವಿಧಾನಿಕವಾಗಿದೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ತ್ರಿವಳಿ ತಲಾಕ್ ಕುರಿತು ಮಹತ್ವದ ತೀರ್ಪು ನೀಡಿದೆ.
ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತ್ರಿವಳಿ ತಲಾಕ್ ನ್ನು ಬೆಂಬಲಿಸುತ್ತಿದ್ದು, ಮುಸ್ಲಿಂ ವೈಯಕ್ತಿಕ ಕಾನೂನು ಕುರಿತು ಹೇಳಿಕೆ ನೀಡಿರುವ ಹೈಕೋರ್ಟ್ ಸಂವಿಧಾನಕ್ಕಿಂತ ದೊಡ್ಡದಾದ ವೈಯಕ್ತಿಕವಾದ ಯಾವುದೇ ಕಾನೂನು ಇಲ್ಲ ಎಂದು ಹೇಳಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತ್ರಿವಳಿ ತಲಾಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದರಿಂದ ವೈಯಕ್ತಿಕ ಕಾನೂನಿಗೆ ಧಕ್ಕೆ ಬರುವಂತಿದೆ ಎಂದು ಹೇಳಿದೆ. ತ್ರಿವಳಿ ತಲಾಕ್ ಪದ್ಧತಿಯನ್ನು ವಿರೋಧಿಸಿ ಇತ್ತೀಚಿನ ದಿನಗಳಲ್ಲಿ ಹಲವು ಮುಸ್ಲಿಂ ಮಹಿಳೆಯರು ಕೋರ್ಟ್ ಮೆಟ್ಟಿಲೇರಿದ್ದರು