ಹೊಸದಿಲ್ಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನವದೆಹಲಿಯಲ್ಲಿ ಮಕ್ಕಳ ಡೈಪರ್ ಗಳಲ್ಲಿ ಸಾಗಿಸುತ್ತಿದ್ದ 16 ಕೆ.ಜಿ ಚಿನ್ನದ ಬಿಸ್ಕೆತ್ ಗಳನ್ನು ಭದ್ರತಾ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
6 ಪ್ರಯಾಣಿಕರು ದುಬೈ ವಿಮಾನ ನಿಲ್ದಾಣದಿಂದ ಬಂದಿದ್ದು, ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ 16 ಕೆ ಜಿ ಚಿನ್ನದ ಬಿಸ್ಕೆಟ್ ಸಿಕ್ಕಿದ್ದು, ಕಸ್ಟಮ್ಸ್ ಅಧಿಕಾರಿಗಳು ವಿಚಾರಿಸಿದಾಗ ಸೂರತ್ ನವರು ಎಂದು ತಿಳಿದು ಬಂದಿದೆ. ಟವಲ್ ಮತ್ತು ಎರಡೂ ಮಕ್ಕಳ ಡೈಪರ್ ಗಳಲ್ಲಿ ಚಿನ್ನದ ಬಿಸ್ಕೆಟ್ಗಳನ್ನು ಅಡಗಿಸಿಡಲಾಗಿತ್ತು.