ಔರಂಗಾಬಾದ್: ಮದುವೆ ಅದ್ದೂರಿಯಾಗಬೇಕೆಂಬ ಆಸೆ ಎಲ್ಲರಿಗೂ ಇರುತ್ತೆ. ಆದರೆ ಹಣವಿದ್ದವರು ತಮಗೆ ಹೇಗೆ ಬೇಕೋ ಹಾಗೆ ಅದ್ದೂರಿಯಾಗಿ ಮದುವೆ ಮಾಡಿಕೊಂಡು ಸಂಭ್ರಮಪಡುತ್ತಾರೆ. ಆದರೆ ಇಲ್ಲೊಬ್ಬಳು ಶ್ರೀಮಂತ ಮಗಳು, ಅದ್ದೂರಿ ಮದುವೆ ಖರ್ಚಿನಿಂದ ಬಡ ಕುಟುಂಬಗಳಿಗೆ ಮನೆ ಮಾಡಿಸಿ, ತನ್ನ ಮದುವೆಯನ್ನು ಸರಳವಾಗಿ ಮಾಡಿಕೊಂಡು ಅರ್ಥಪೂರ್ಣ ಕೆಲಸ ಮಾಡಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ನ ಶ್ರೀಮಂತ ಮನೆತನದ ಶ್ರೇಯಾ ಮುನೋದ್ ಎಂಬಾಕೆ ಕುಟುಂಬದವರ ಆಸೆಯಂತೆ ಅದ್ದೂರಿ ಮದುವೆಯಾಗಲು ಇಚ್ಛಿಸದೆ ಸರಳವಾಗಿ ಮದುವೆ ಮಾಡಿಕೊಂಡು, ಅದ್ದೂರಿ ಮದುವೆಯ ದುಡ್ಡಿನಿಂದ ಬಡವರಿಗೆ 108 ಮನೆ ನಿರ್ಮಿಸಿ ಮಹತ್ಕಾರ್ಯ ನೆರವಬೇರಿಸಿದ್ದಾರೆ.
ಅಂತೆಯೇ ಮದುವೆ ದಿನ ಸಮೀಪಿಸುವುದರೊಳಗೆ 90 ಮನೆಗಳನ್ನು ನಿರ್ಮಾಣ ಪೂರ್ಣಗೊಳಿಸಿದ್ದಾರೆ. ಬಡ ಫಲಾನುಭವಿಗಳನ್ನು ಮದುವೆಗೆ ಆಹ್ವಾನಿಸಿ ಕಲ್ಯಾಣ ಮಂಟಪದಲ್ಲೇ ಮನೆಯ ಬೀಗಗಳನ್ನು ಅವರಿಗೆ ಕೊಟ್ಟು ಮನೆಗಳನ್ನು ಹಸ್ತಾಂತರಿಸಿದ್ದಾರೆ. ಈಕೆಯ ಈ ಕಾರ್ಯಕ್ಕೆ ತವರು ಮನೆಯವರು ಹಾಗೂ ಗಂಡನ ಮನೆಯವರು ಸಹಕಾರ ನೀಡಿದ್ದಾರೆ.