ಮುಂಬೈ: ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡಬೇಕೆಂದು ರಾಷ್ಟ್ರೀಯ ರಿಸರ್ವ್ ಬ್ಯಾಂಕ್ ದೇಶಾದ್ಯಂತ ನೋಟು ನಿಷೇಧ ಬಳಿಕ ಎಲ್ಲಾ ಬ್ಯಾಂಕ್ ಗಳಿಗೆ ಆದೇಶ ಹೊರಡಿಸಿದೆ.
ನವೆಂಬರ್ 8 ರಿಂದ ಡಿಸೆಂಬರ್ 30ರವರೆಗಿನ ಬ್ಯಾಂಕ್ ವ್ಯವಹಾರಗಳ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಬೇಕೆಂದು ಈ ಬಗ್ಗೆ ಮಾಹಿತಿಯನ್ನು ಆರ್ಬಿಐ ಯಾವಾಗ ಬೇಕಾದರೂ ಕೇಳುವ ಸೂಚನೆಯನ್ನು ನೀಡಿದೆ.
ಬ್ಯಾಂಕಿನವರರೇ ಕಾಳಧನಿಕರಿಗೆ ನೋಟು ನಿಷೇಧಗೊಂಡ ನಂತರ ಸಹಕರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಕಲಿ ದಾಖಲೆ ನೀಡುವ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಎಲ್ಲಾ ಬ್ಯಾಂಕ್ ಗಳ ಬ್ಯಾಂಕಿಂಗ್ ಹಾಲ್, ಕೌಂಟರ್ ಮತ್ತು ಎಲ್ಲಾ ಜಾಗಗಳಲ್ಲಿಯೂ ಸಿಸಿಟಿವಿಯನ್ನು ಅಳವಡಿಸುವಂತೆ ಅಕ್ಟೋಬರ್ 27ರಂದು ಅಪೆಕ್ಸ್ ಬ್ಯಾಂಕ್ ಸೂಚನೆ ಹೊರಡಿಸಿತ್ತು.