ಇತ್ತೀಚೆಗೆ ಗಣ್ಯ ವ್ಯಕ್ತಿಗಳ ಜೀವನಕಥೆಯನ್ನಾಧರಿಸಿದ ಚಿತ್ರಗಳು ಬರುವುದು ಸಾಮಾನ್ಯವಾಗಿದ್ದು, ಇದೀಗ ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ‘ಮೋದಿ ಕಾ ಗಾಂವ್’ ಚಿತ್ರ ರಿಲೀಸ್ ಆಗಲಿದೆ.
ಪಕ್ಕಾ ಮೋದಿಯನ್ನೇ ಹೋಲುವ ಉದ್ಯಮಿ ವಿಕಾಸ್ ಮಹಂತೆ ಮೋದಿ ಪಾತ್ರದಲ್ಲಿ ಬಣ್ಣಹಚ್ಚಿದ್ದು, ಇದೀಗ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
2 ಗಂಟೆ 15 ನಿಮಿಷದ ‘ಮೋದಿ ಕಾ ಗಾಂವ್’ ಚಿತ್ರದ ಶೂಟಿಂಗ್ ಸಂಪೂರ್ಣ ಮುಗಿದಿದ್ದು, ಮೆಗಾ ಪ್ರಿಮಿಯರ್ ಗೆ ನಿರ್ದೇಶಕರು ತಯಾರಿ ನಡೆಸುತ್ತಿದ್ದಾರೆ. ಸುರೇಶ್ ಝಾ ಚಿತ್ರದ ನಿರ್ದೇಶನದ ಜೊತೆಗೆ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದು ಮೋದಿ ಜೀವನಾಧಾರಿತ ಚಿತ್ರವಲ್ಲ ಎಂದು ಸುರೇಶ್ ಝಾ ಸ್ಪಷ್ಟಪಡಿಸಿದ್ದಾರೆ.