ಉತ್ತರಪ್ರದೇಶ: ಪ್ರತಾಪ್ ಗಢ್ ನಲ್ಲಿ 20 ವರ್ಷದ ಯುವಕನನ್ನು ಸಜೀವ ದಹನ ಮಾಡಿದ ವಿಚಿತ್ರ ಘಟನೆ ನಡೆದಿದೆ.
ರಂಗಿಲಿ ಎಂಬ ಮಹಿಳೆ ಅರ್ಜುನ್ ಸಿಂಗ್ ಚೌಹಾಣ್ ಎಂಬ 20 ವರ್ಷದ ಯುವಕನನ್ನು ಹತ್ಯೆ ಮಾಡಿದ್ದಾಳೆ. ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ರಂಗಿಲಿ ಈ ದುಷ್ಕ್ಯೃತ್ಯ ನಡೆಸಿದ್ದಾಳೆ.
ರಂಗಿಲಿ ಹಲವು ದಿನಗಳಿಂದಲೂ ಈತನ ಮೇಲೆ ಕಣ್ಣಿಟ್ಟಿದ್ದು, ಅರ್ಜುನ್ ನಿನ್ನೆ ಜೇಥ್ವಾನಾ ಪ್ರದೇಶಕ್ಕೆ ಮಹಿಳೆಯನ್ನು ಭೇಟಿಯಾಗಲು ಹೋದಾಗ ಸ್ಥಳಕ್ಕೆ ತೆರಳಿದ ರಂಗಿಲಿ ಮತ್ತಿಬ್ಬರು ವ್ಯಕ್ತಿಗಳೊಂದಿಗೆ ಸೇರಿ ಯುವಕನನ್ನು ಸಜೀವ ದಹನ ಮಾಡಿದ್ದಾಳೆ.
ಬೆಂಕಿಯಲ್ಲಿ ನರಳುತ್ತಿದ್ದ ಅರ್ಜನ್ ನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಅದರೂ ಯುವಕ ಸಾವನ್ನಪ್ಪಿದ್ದಾನೆ. ಈ ಪ್ರಕರಣ ಪೋಲೀಸರು ತನಿಖೆ ನಡೆಸುತ್ತಿದ್ದು, ಮಹಿಳೆ ಹಾಗೂ ಮತ್ತಿಬ್ಬರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.