ಜಮ್ಮು: ತಮ್ಮ ಸರ್ವಿಸ್ ಪಿಸ್ತೂಲಿನಿಂದ ಗುಂಡುಹಾರಿಸಿಕೊಂಡು 36ರ ಹರೆಯದ ಭಾರತೀಯ ಸೇನೆಯ ಮೇಜರ್ ಅನಿತಾ ಕುಮಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆರೆಮನೆಯವರು ಮೇಜರ್ ಅವರ ಮನೆ ಬಾಗಿಲನ್ನು ಒಡೆದು ಒಳಹೋದಾಗ ಅನಿತಾ ಅವರು ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ತನ್ನ ಸರ್ವಿಸ್ ಪಿಸ್ತೂಲಿನಿಂದ ಗುಂಡುಹಾರಿಸಿಕೊಂಡು ಇದೇ ತಿಂಗಳ 14-15 ರ ಮಧ್ಯರಾತ್ರಿಯ ಸಮಯ ಆತ್ಮಹತ್ಯೆ ಮಾಡಿಕೊಂಡತಿದೆ ಎಂದು ಪೋಲೀಸರು ಹೇಳಿದ್ದಾರೆ.
ಅನಿತಾ ಕುಮಾರಿ ಅವರನ್ನು ಇಲ್ಲಿನ 259ನೇ ಫೀಲ್ಡ್ ಸಪ್ಲೆ, ಡಿಪೋ ಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಇವರು ಮೂಲತಃ ಹಿಮಾಚಲ ಪ್ರದೇಶದ ಚಂಬಾದವರು.