ಟರ್ಕಿ: ಸೈನಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಕೈಸೆರಿ ನಗರದಲ್ಲಿ ನಡೆದ ಕಾರ್ಬಾಂಬ್ ದಾಳಿಯಲ್ಲಿ 48 ಮಂದಿ ಗಾಯಗೊಂಡಿದ್ದು, 13 ಮಂದಿ ಸೈನಿಕರು ಮೃತಪಟ್ಟಿದ್ದಾರೆ.
ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವು ನಾಗರೀಕರಿಗೂ ಗಾಯಗಳಾಗಿದ್ದು, ಎರ್ಸಿಯೆಸ್ ವಿಶ್ವವಿದ್ಯಾಲಯದ ಹತ್ತಿರ ಈ ದಾಳಿ ನಡೆದಿದೆ ಎಂದು ಟರ್ಕಿ ಸೇನೆ ತಿಳಿಸಿದೆ.
ಇದುವರೆಗೂ ಈ ದಾಳಿ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತಿಲ್ಲ, ಕೆಳಹಂತದ ಸೈನಿಕರು ಹಾಗೂ ಅಧಿಕಾರಿಗಳ ಬಸ್ ನಗರದ ಕಮಾಂಡೊ ಮುಖ್ಯ ಕಚೇರಿಗೆ ತೆರಳುತ್ತಿದ್ದ ಸಂದರ್ಭ ಈ ದಾಳಿ ನಡೆಸಲಾಗಿದೆ.