ಅರುಣಾಚಲ: ಇಂದು ಮುಂಜಾನೆ ಅಪ್ಪರ್ ಸಿಯಾಂಗ್ ಜಿಲ್ಲೆಯ ಸುತ್ತಮುತ್ತ ಲಘು ಭೂಕಂಪ ಸಂಭವಿಸಿದ್ದು, ಭೂವಿಜ್ಞಾನ ಕೇಂದ್ರದ ಅಧಿಕಾರಿಗಳು ಮಾಹಿತಿಯ ಪ್ರಕಾರ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.8ರಷ್ಟು ದಾಖಲಾಗಿದೆ.
ಭೂಕಂಪನದಿಂದ ಯಾವುದೇ ಹಾನಿಯಾಗಿಲ್ಲ ಎಂದು ಮಾಹಿತಿ ಬಂದಿದ್ದು, ಇಲ್ಲಿನ ನಿವಾಸಿಗಳು ಭೂಮಿ ನಡುಗಿದ ಅನುಭವ ಆಗಿದ್ದರಿಂದ ಮನೆಯಿಂದ ಹೊರ ಓಡಿ ಮೈದಾನ ಪ್ರದೇಶದಲ್ಲಿ ಬಂದು ನಿಂತ ಘಟನೆ ನಡೆದಿದೆ.