ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯ ಭಲುಕ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಕುಖ್ಯಾತ ನಕ್ಸಲ್ ಮುಖಂಡರನ್ನು ರಾತ್ರಿ ಬಂಧಿಸಲಾಗಿದೆ.
ಪಂಕಜ್ ಯಾದವ್, ಭೋಲಾ ಯಾದವ್ ಬಂಧಿತ ನಕ್ಸಲ್ ಮುಖಂಡರು. ನಕ್ಸಲರು ಅರಣ್ಯದಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸಶಸ್ತ್ರ ಸೀಮಾ ಬಲ ಸೈನಿಕರು ಭಾನುವಾರ ರಾತ್ರಿಯೇ ಕಾರ್ಯಾಚರಣೆ ನಡೆಸಿ, ಚಾಣಾಕ್ಷವಾಗಿ ಇವರನ್ನು ಬಂಧಿಸಿದ್ದಾರೆ.
ಬಿಹಾರ ಪೊಲೀಸ್ ಮೂಲಗಳ ಪ್ರಕಾರ ಎರಡು ಬಂದೂಕುಗಳು, ಒಂದು ಸ್ವಯಂ ಚಾಲಿತ ಪಿಸ್ತೂಲು, 305 ಬುಲೆಟ್ ಗಳ ಕಾರ್ಟಿಡ್ಜ್, 2 ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ 2 ಮೊಬೈಲ್ ಹಾಗೂ ಒಂದು ಬೈಕ್, ಏಳು ಜೀವಂತ ಬಾಂಬ್ ಗಳುನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ತಮ್ಮನ್ನು ಹಿಡಿಯಲು ಬರುವ ಪೊಲೀಸರು ಮತ್ತು ಸೈನಿಕರನ್ನು ಸ್ಫೋಟಿಸಲು ಈ ಬಾಂಬ್ ಗಳನ್ನು ನೆಲದೊಳಗೆ ಹುದುಗಿಸಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.