ಬರ್ಲಿನ್: ಐಕೋನಿಕ್ ಕೈಸರ್ ವಿಲ್ಹೆಲ್ಮ್ ಮೆಮೋರಿಯಲ್ ಚರ್ಚ್ ಬಳಿರುವ ಕ್ರಿಸ್’ಮಸ್ ಮಾರುಕಟ್ಟೆ ರಸ್ತೆ ಬಳಿ ಶಂಕಿತ ಉಗ್ರರು ದಾಳಿ ಮಾಡಿದ್ದು, ಜನನಿಬಿಡ ಪ್ರದೇಶದ ಮೇಲೆ ಟ್ರಕ್ ನುಗ್ಗಿಸಿದ ಪರಿಣಾಮ 9 ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ.
ಬ್ರೈಟ್ಸಚೀಡ್ ಪ್ಲಾಟ್ಜಾ ನಗರದ ಬಳಿ ಘಟನೆ ನಡೆಸಿದ್ದು, ಈಗಾಗಲೇ ಶಂಕಿತರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಬಳಿರುವ ಕ್ರಿಸ್’ಮಸ್ ಮಾರುಕಟ್ಟೆ ರಸ್ತೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಸಂದರ್ಭವನ್ನೇ ಎದುರು ನೋಡುತ್ತಿದ್ದ ಶಂಕಿತ ಉಗ್ರರು ಜನನಿಬಿಡ ಪ್ರದೇಶದ ಮೇಲೆ ಟ್ರಕ್ ನುಗ್ಗಿಸಿದ್ದಾರೆ. ಪರಿಣಾಮ ಸ್ಥಳದಲ್ಲಿ 9 ಮಂದಿ ಸಾವನ್ನಪ್ಪಿ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಕಪ್ಪುಬಣ್ಣದ ಟ್ರಕ್ ವೊಂದು ವೇಗಗತಿಯಲ್ಲಿ ಬಂದು ಇದ್ದಕ್ಕಿದ್ದಂತೆ ಜನರ ಮೇಲೆ ಹೋಗಿತ್ತು. ಈ ವೇಳೆ ಜನರು ಜೋರಾಗಿ ಕಿರುಚಾಡಲು ಆರಂಭಿಸಿದ್ದರು. ನಂತರ ಅಪಾಯದಲ್ಲಿ ಸಿಲುಕಿದ್ದ ಕೆಲವರನ್ನು ರಕ್ಷಣೆ ಮಾಡಿದೆ. ಸ್ಥಳದಲ್ಲಿ ಎಲ್ಲಿ ನೋಡಿದರೂ ರಕ್ತವೇ ಕಾಣಿಸುತ್ತಿತ್ತು ಎಂದು ಸ್ಥಳೀಯ ಒ’ನೀಲ್ ಎಂಬುವವರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.