ವಾರಣಾಸಿ: ಡಿಸಂಬರ್ 05 ರಿಂದ 11 ರವರೆಗೆ ವಿಶ್ವವಿಖ್ಯಾತ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಆವರಣದಲ್ಲಿ ಕೇಂದ್ರ ಲಲಿತಕಲಾ ಅಕಾಡಮಿ–ದೆಹಲಿ, ಕೇಂದ್ರ ಸಂಸ್ಕøತಿ ನಿರ್ದೇಶನಾಲಯ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಬೃಹತ್ ರಾಷ್ಟ್ರೀಯ ಕಲಾ ಉತ್ಸವದಲ್ಲಿ ಭಾಗವಹಿಸಲು ಅಖಂಡ ಬಾರತದಿಂದ 45 ಜನ ಹಿರಿಯ ಕಲಾವಿದರಿಗೆ ಆಹ್ವಾನಿಸಲಾಗಿತ್ತು.
ಈ ಬೃಹತ್ ರಾಷ್ಟ್ರೀಯ ಚಿತ್ರಕಲಾ ಶಿಬಿರವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಗಿರೀಶ್ಚಂದ್ರ ತ್ರಿಪಾಟಿ ರವರು ಉದ್ಘಾಟಿಸಿದರು. ಕೇಂದ್ರ ಲಲಿತಕಲಾ ಅಕಾಡಮಿಯ ಆಡಳಿತಾಧಿಕಾರಿಗಳಾದ ಶ್ರೀ ಚಿ.ಸು ಕೃಷ್ಣ ಶೆಟ್ಟಿರವರು ಅಧ್ಯಕ್ಷತೆಯನ್ನು ವಹಿಸಿದ್ದರು.
ದೃಶ್ಯಕಲಾ ವಿಭಾಗದ ಡೀನ್ ರವರಾದ ಶ್ರೀ ಹರಿಲಾಲ್ ಪ್ರಜಾಪತಿಯವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಭಾಗವಹಿಸಿದ ಕಲಾವಿದರು “ಕಲಾವಿದನ ಕಣ್ಣಿನಲ್ಲಿ ವಾರಣಾಸಿ “ಎಂಬ ಶಿರ್ಷಿಕೆಯಡಿಯಲ್ಲಿ 2 ಚಿತ್ರಗಳನ್ನು ರಚಿಸಲು ತಿಳಿಸಲಾಗಿತ್ತು. ಕರ್ನಾಟಕದಿಂದ ಭಾಗವಹಿಸಿದ್ದ ಚಿಕ್ಕಮಗಳೂರಿನ ವಿಶ್ವಕರ್ಮ ಆಚಾರ್ಯ ಪ್ರಾಚಾರ್ಯರು ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ ಇವರು ವಿಶೇಷವಾಗಿ “ವಾರಣಾಸಿಯ ಗಂಗಾರತಿ” ಹಾಗೂ “ದೈವಿಕ ಪ್ರೀತಿ” ಎರಡು ಕಲಾಕೃತಿಗಳು ರಚಿಸಿದ್ದರು ಅವುಗಳು ಕಲಾವಿದರ ಹಾಗೂ ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಹಿತು.
ದಿನಾಂಕ 17ರಿಂದ ಆರಂಭಗೂಂಡ ಬೃಹತ್ ರಾಷ್ಟ್ರೀಯ ಚಿತ್ರಕಲಾ ಶಿಬಿರದಲ್ಲಿ ರಚಿತವಾದ 90 ಕಲಾಕೃತಿಗಳು ಹಾಗೂ ವಿಶೇಷವಾಗಿ ಪ್ರಥಮ ಭಾರಿಗೆ ಶಿಬಿರದಲ್ಲಿ ಶಿರ್ಷಿಕೆಯಡಿಯಲ್ಲಿ ತೆಗೆಯಲಾದ ಸೃಜನಶೀಲ ಛಾಯಾಚಿತ್ರ ಪ್ರದರ್ಶನವನ್ನು ಕೇಂದ್ರ ಸಂಸ್ಕøತಿ ನಿರ್ದೆಶನಾಲಯದ ಸಚಿವರಾದ ಸನ್ಮಾನ್ಯ ಮಹೇಶ್ ಶರ್ಮ ಹಾಗೂ ಭಾರತ ಸರ್ಕಾರದ ಸಂಸ್ಕøತಿ ಕಾರ್ಯದರ್ಶಿಗಳಾದ ಸನ್ಮಾನ್ಯ ಎನ್. ಕೆ ಸಿಂಹರವರು ಉದ್ಘಾಟಿಸಿ ಶುಭ ಕೋರಿದರು.