ಇಸ್ಲಾಮಾಬಾದ್: ಪಾಕ್ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಬುಧವಾರ ಮಾತನಾಡಿ ಭಾರತದೊಂದಿಗೆ ಇರುವ ಎಲ್ಲಾ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿದ್ದಾರೆ.
ದೇಶ ಪರಿಣಾಮಕಾರಿಯಾಗಿ ತೆಹ್ರೀಕ್-ಇ-ತಾಲಿಬಾನ್ ಮತ್ತು ಅಲ್ ಖೈದಾ ಪಾಕಿಸ್ತಾನ ಉಗ್ರ ಸಂಘಟನೆಗಳ ಬೆದರಿಕೆಗಳನ್ನು ಎದುರಿಸುತ್ತಿದ್ದು, ಇದೀಗ ಪಾಕ್ ನಲ್ಲಿ ಡೀಶ್ ಉಗ್ರ ಸಂಘಟನೆ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಭಯೋತ್ಪಾದನೆ ಕುರಿತಂತೆ ಬೊಸ್ನಿಯಗೆ ಮೂರು ದಿನಗಳ ಕಾಲ ಭೇಟಿ ನೀಡಿರುವ ಅವರು ಹೇಳಿದ್ದಾರೆ.
ಪಾಕಿಸ್ತಾನ ಉಗ್ರ ಸಂಘಟನೆಗಳಾದ ಅಲ್ ಖೈದಾ ಹಾಗೂ ತೆಹ್ರೀಕ್-ಇ-ತಾಲಿಬಾನ್ ಅಡಗುತಾಣಗಳನ್ನು ನಾಶ ಮಾಡಿದ್ದು, ಪಾಕಿಸ್ತಾನ ಭಯೋತ್ಪಾದನೆಗೆ ಸಾಕಷ್ಟು ಬೆಲೆಯನ್ನು ತೆತ್ತಿದೆ ಹಾಗೂ ಈ ಭಯೋತ್ಪಾದನೆ ಪಿಡುಗಿಗೆ ಕೊನೆ ಹಾಡಲು ಪಾಕ್ ನಿರ್ಧಾರ ಕೈಗೊಂಡಿದೆ ಎಂದು ನವಾಜ್ ಷರೀಫ್ ಹೇಳಿದ್ದಾರೆ.