ಹೊಸದಿಲ್ಲಿ: ಇಂದು ನಸುಕಿನ ವೇಳೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಭೂಕಂಪನವಾಗಿದ್ದು, ಆತಂಕಗೊಂಡ ಜನತೆ ಮನೆ, ಕಟ್ಟಡಗಳಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.
ಸುಮಾರು 3.57ರ ನಸುಕಿನ ವೇಳೆ ಹೊತ್ತಿಗೆ ಭೂಮಿ ಕಂಪಿಸಿದ್ದು, ಇದರಿಂದ ಯಾವುದೇ ಕಷ್ಟ ನಷ್ಟ, ಸಾವು ನೋವುಗಳಾಗಲೀ ಸಂಭವಿಸಿಲ್ಲ. ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.2 ಅಂಕಗಳ ಪ್ರಮಾಣದಲ್ಲಿ ದಾಖಲಾಗಿದೆ.