ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಅಜ್ಮೀರ್-ಸೇಲ್ಡಹ್ ಎಕ್ಸ್ಪ್ರೆಸ್ ರೈಲಿನ 15 ಬೋಗಿಗಳು ಹಳಿ ತಪ್ಪಿ ದುರಂತ ಸಂಬವಿಸಿದ್ದು, ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ, 26ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬುಧವಾರ ಬೆಳಗ್ಗೆ 6 ಗಂಟೆಗೆ ಇಲ್ಲಿಗೆ 70 ಕಿ.ಮೀ. ದೂರದಲ್ಲಿರುವ ರೂರಾ ಸ್ಟೇಷನ್ ಬಳಿ ರೈಲು ಹಳಿ ತಪ್ಪಿದೆ. ಬ್ರಿಡ್ಜ್ ದಾಟುವ ವೇಳೆ 13 ಸ್ಲೀಪರ್ ಬೋಗಿಗಳು ಮತ್ತು 2 ಜನರಲ್ ಬೋಗಿಗಳು ಸೇರಿದಂತೆ ಒಟ್ಟು 15 ಬೋಗಿಗಳ ಹಳಿ ತಪ್ಪಿದ್ದು, ಬೋಗಿಗಳು ಪಕ್ಕದಲ್ಲಿರುವ ಕಾಲುವೆಗೆ ಉರುಳಿ ಬಿದ್ದಿವೆ. ಸ್ಥಳೀಯ ಅಗ್ನಿ ಶಾಮಕ ದಳದ ಅಧಿಕಾರಿಗಳು ಕೂಡ ರೈಲ್ವೇ ಪೊಲೀಸರಿಗೆ ಸಾಥ್ ನೀಡುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಘಟನೆಯಲ್ಲಿ ಗಾಯಗೊಂಡವರಲ್ಲಿ 5 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.