ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧವಾಗಿ 50 ದಿನಗಳ ನಂತರ ದೇಶದ ಆರ್ಥಿಕತೆಯಲ್ಲಿ ಉಂಟಾಗಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ನೋಟ್ ಬ್ಯಾನ್ ನಂತರ ದೇಶಕ್ಕೆ ಆರ್ಥಿಕವಾಗಿ ಎದುರಾಗಿರುವ ಸಮಸ್ಯೆಗಳು, ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಶುಕ್ರವಾರ ಅಥವಾ ಶನಿವಾರದಂದು ಪ್ರಧಾನಿ ಭಾಷಣ ಮಾಡಲಿದ್ದು, ದಿನಾಂಕ ಇನ್ನೂ ಖಚಿತವಾಗಿಲ್ಲ.
ಆರ್ಥಿಕ ತಜ್ಞರು ಹಾಗೂ ನೀತಿ ಆಯೋಗದ ಸದಸ್ಯರೊಡನೆ ಈಗಿನ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಮಂಗಳವಾರ ಸಮಾಲೋಚನೆ ನಡೆಸಿದ ಮೋದಿ, ಕೆಲ ದಿನಗಳ ಹಿಂದೆ ಸಾರ್ವಜನಿಕ ಸಭೆಯಲ್ಲಿಯೂ ಮಾತನಾಡಿ, ಕೇಂದ್ರ ಸರ್ಕಾರದ ನಿರ್ಧಾರ ದೇಶದ ಜನರಿಗೆ ಕೆಲಕಾಲ ನೋವನ್ನುಂಟು ಮಾಡಿದ್ದು, ಅದನ್ನು ಸ್ವಲ್ಪ ದಿನ ಸಹಿಸಿಕೊಳ್ಳಬೇಕು ಎಂದಿದ್ದರು.