ಫಿಲಿಪ್ಪೀನ್ಸ್ ನಲ್ಲಿ ಆಸಿಯಾನ್ ಶೃಂಗಸಭೆ: ಮೋದಿ- ಟ್ರಂಪ್ ಮಹತ್ವದ ಮಾತುಕತೆ

ಫಿಲಿಪ್ಪೀನ್ಸ್ ನಲ್ಲಿ ಆಸಿಯಾನ್ ಶೃಂಗಸಭೆ: ಮೋದಿ- ಟ್ರಂಪ್ ಮಹತ್ವದ ಮಾತುಕತೆ

Nov 13, 2017 10:12:30 AM (IST)
ಫಿಲಿಪ್ಪೀನ್ಸ್ ನಲ್ಲಿ ಆಸಿಯಾನ್ ಶೃಂಗಸಭೆ: ಮೋದಿ- ಟ್ರಂಪ್ ಮಹತ್ವದ ಮಾತುಕತೆ

ನವದೆಹಲಿ: ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಫಿಲಿಪ್ಪೀನ್ಸ್ಗೆ ಆಗಮಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ವಿಶ್ವದ ಇತರ ನಾಯಕರೊಂದಿಗೆ ಕುಶಲೋಪರಿಯಲ್ಲಿ ತೊಡಗಿದರು.

ಮೋದಿ ಮೂರು ದಿನಗಳ ಕಾಲ ಫಿಲಿಪ್ಪೀನ್ಸ್ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿದ್ದು, ಭಾರೀ ಮಹತ್ವವನ್ನು ಪಡೆಯಲಿದೆ.

ಮಂಗಳವಾರ 31ನೇ ಆಸಿಯಾನ್ ಇಂಡಿಯಾ ಮತ್ತು 15ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಂಳ್ಳಲಿದ್ದಾರೆ.