ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರು ಇಸ್ತಾನ್ ಬುಲ್ ನೈಟ್ ಕ್ಲಬ್ ಮೇಲೆ ನಡೆದ ದಾಳಿಯ ಬಗ್ಗೆ ಮಾತನಾಡಿ ಮೃತಪಟ್ಟ 39 ಮಂದಿಯಲ್ಲಿ ಇಬ್ಬರು ಭಾರತೀಯರಾಗಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಮೃತರಾದವರಲ್ಲಿ ಕನಿಷ್ಠ 16 ಮಂದಿ ವಿದೇಶಿಗರಾಗಿದ್ದಾರೆ. ಹೊಸ ವರ್ಷಾಚರಣೆ ಸಂದರ್ಭ ಬಂದೂಕುಧಾರಿಯೊಬ್ಬ ಇಸ್ತಾನ್ ಬುಲ್ ನ ಸುಂದಾ ಎಂಬಲ್ಲಿನ ನೈಟ್ ಕ್ಲಬ್ ವೊಂದರಲ್ಲಿ ಗುಂಡು ಹಾರಿಸಿದ್ದು, ಮೃತರಾದವರಲ್ಲಿ ಇಬ್ಬರು ಭಾರತೀಯರಾಗಿದ್ದು, ಗುಜರಾತ್ ನ ಮಾಜಿ ರಾಜ್ಯಸಭಾ ಸದಸ್ಯರ ಪುತ್ರ ಅಬೀಸ್ ರಿಜ್ವಿ ಮತ್ತು ಖುಷಿ ಷಾ ಎಂದು ಗುರುತಿಸಲಾಗಿದೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.