ರೋಹ್ಟಕ್: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಹರಿಯಾಣ ಮೂಲದ ವ್ಯಕ್ತಿಯೊಬ್ಬ ಚಪ್ಪಲಿ ಎಸೆದ ಘಟನೆ ಭಾನುವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ನಡೆದಿದೆ.
ಕೇಜ್ರಿವಾಲ್ ಮೇಲೆ ಎಸೆದ ಚಪ್ಪಲಿ ಪಕಕ್ಕೆ ಬಿದ್ದಿದ್ದು, ಈ ಘಟನೆಯಿಂದ ಕೋಪಗೊಂಡ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ದಾದ್ರಿ ಜಿಲ್ಲೆಯ ವಿಕಾಸ್ ಕುಮಾರ್ ಕೇಜ್ರಿವಾಲ್ ಮೇಲೆ ಚಪ್ಪಲಿ ಎಸೆದವನಾಗಿದ್ದು, ಎಎಪಿ ಕಾರ್ಯಕರ್ತರು ಘಟನೆ ನಂತರ ಕುಮಾರ್ ಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಪೊಲೀಸರು ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದು ಹೇಡಿತನ ಕೃತ್ಯವಾಗಿದ್ದು, ಮೋದಿ ತಮ್ಮ ಬೆಂಬಲಿಗರ ಮೂಲಕ ನಮ್ಮ ಮೇಲೆ ಚಪ್ಪಲಿ ಎಸೆದಿದ್ದಾರೆ. ಎಂದು ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ.