ಶ್ರೀನಗರ: ಕಳೆದ ರಾತ್ರಿ ಉಗ್ರರು ಓಡಾಡುತ್ತಿರುವುದಾಗಿ ಅನುಮಾನಗೊಂಡ ಭಾರತೀಯ ಸೇನೆ ಓರ್ವ ಉಗ್ರನನ್ನು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಮಂಗಳವಾರ ಹೊಡೆದುರುಳಿಸಿದೆ ಎಂದು ತಿಳಿದು ಬಂದಿದೆ.
ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ಉಗ್ರರು ಓಡಾಡುತ್ತಿರುವುದು ಅನುಮಾನಗೊಂಡ ಭಾರತೀಯ ಸೇನೆ ಕಾರ್ಯಾಚರಣೆಗಿಳಿದಾಗ ಉಗ್ರರು ದಾಳಿ ನಡೆಸಲು ಮುಂದಾದರು. ಉಗ್ರರ ವಿರುದ್ದ ಪ್ರತಿದಾಳಿ ನಡೆಸಿದ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ತಿಳಿದು ಬಂದಿದೆ.