ಹೊಸದಿಲ್ಲಿ: ತಮಿಳುನಾಡು ಸರ್ಕಾರ ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರಕ್ಕೆ ಜಲ್ಲಿಕಟ್ಟು ಆಯೋಜಿಸಲು ಅವಕಾಶ ನೀಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಪತ್ರವನ್ನು ಬರೆದಿದ್ದು, ಇದೀಗ ಸೊಪ್ರೀಂ ಕೋರ್ಟ್ ಈ ಮನವಿಯನ್ನು ತಳ್ಳಿ ಹಾಕಿದೆ.
ಜಲ್ಲಿಕಟ್ಟು ಆಚರಣೆಗೆ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ಅನುವು ಮಾಡಿಕೊಡಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಈ ಕುರಿತು ಕರಡನ್ನು ರಚಿಸಲಾಗಿದ್ದು, ಶನಿವಾರದೊಳಗೆ ತೀರ್ಪು ನೀಡಲು ಸಾಧ್ಯವಿಲ್ಲವೆಂದು ನುಡಿದಿದೆ.
ತಮಿಳುನಾಡಿನಲ್ಲಿ ಈ ವರ್ಷ ಸಂಕ್ರಾಂತಿಗೆ ಜಲ್ಲಿಕಟ್ಟು ನಡೆಯುವುದು ಸಂಶಯವಾಗಿದ್ದು, ನ್ಯಾಯಪೀಠ ಜಲ್ಲಿಕಟ್ಟಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸುವುದು ಸಮಂಜಸವಲ್ಲ ಎಂದು ಹೇಳಿದೆ.
ಪ್ರಾಣಿದಯಾ ಸಂಘಗಳು ಜಲ್ಲಿಕಟ್ಟು ಆಚರಣೆಯಿಂದ ಗೂಳಿಗಳು ತೀವ್ರ ಹಿಂಸೆ ಅನುಭವಿಸುತ್ತದೆ ಎಂದು ಈ ಆಚರಣೆ ವಿರೋಧಿಸಿ ಅರ್ಜಿ ಸಲ್ಲಿಸಿದ್ದು, ಎರಡು ವರ್ಷಗಳಿಂದ ಜಲ್ಲಿಕಟ್ಟನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು, ಇದೀಗ ಈ ಆಚರಣೆ ತಾತ್ಕಾಲಿಕವಾಗಿ ನಿಂತಿದೆ.