ಜಮ್ಮು: ಭಾರತೀಯ ಸೇನೆಯು ಸಾಂಬಾ ಜಿಲ್ಲೆಯ ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ದೇಶದ ಒಳನುಸುಳಲು ಯತ್ನ ನಡೆಸುತ್ತಿದ್ದ ಉಗ್ರರ ಗುಂಪನ್ನು ಹಿಮ್ಮೆಟ್ಟಿಸಿದೆ.
ಬಿಎಸ್ಎಫ್ ಅಧಿಕಾರಿ ಮಾಹಿತಿಯ ಪ್ರಕಾರ ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಗಡಿ ಭಾಗದಿಂದ 4-6 ಉಗ್ರರ ಗುಂಪು ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಭಾರತ ಒಳಗೆ ನುಸುಳಲು ಯತ್ನ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಓರ್ವ ಶಂಕಿತ ಉಗ್ರನ ಮೃತ ದೇಹ ಸ್ಥಳದಲ್ಲಿರುವುದಾಗಿ ಸಂಶಯಗಳು ವ್ಯಕ್ತವಾಗಿದ್ದು, ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಭಾರತೀಯ ಸೇನೆಯು ಉಗ್ರರು ಒಳನುಸುಳುವುದನ್ನು ಕಂಡು ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಿದ್ದು, ಉಗ್ರರು ಭಾರತೀಯ ಸೇನೆಯ ಪರಿಣಾಮಕಾರಿ ದಾಳಿಯಿಂದಾಗಿ ಸ್ಥಳದಿಂದ ಓಡಿ ಹೋಗಿದ್ದರು.