ಶ್ರೀನಗರ: ಭಾನುವಾರ ರಾತ್ರಿ ಭದ್ರತಾಪಡೆಯು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆಸಿದ ಎನ್ಕೌಂಟರ್ನಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ.
ಗುಪ್ತಚರ ಮಾಹಿತಿಯನ್ನಾದರಿಸಿ ಭದ್ರತಾಪಡೆಯು ಭಾನುವಾರ ಎನ್ಕೌಂಟರ್ ನಡೆಸಿತು. ಭದ್ರತಾ ಪಡೆ ಮತ್ತು ಉಗ್ರರ ಮಧ್ಯೆ ಇಡೀ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯಿಂದ ಉಗ್ರರನ್ನು ಬಲಿ ಪಡೆಯಲಾಯಿತು ಎಂದು ಸೇನೆ ಸೋಮವಾರ ಹೇಳಿದೆ.
ಮೂರು ಎಕೆ47 ರೈಫಲ್ಗಳನ್ನು ಘಟನಾ ಸ್ಥಳದಲ್ಲಿ ವಶ ಪಡಿಸಲಾಗಿದ್ದು, ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ವ್ಯಾಪ್ತಿಯ ಅವೋರಾ ಗ್ರಾಮದಲ್ಲಿ ಎನ್ಕೌಂಟರ್ ನಡೆದಿದೆ ಎಂದು ಸೇನೆ ಸೋಮವಾರ ಹೇಳಿದೆ.