ಚೆನ್ನೈ: ತಮಿಳುನಾಡಿನ ಮಾಜಿ ಸಿ.ಎಂ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಹೊಸ ಪಕ್ಷ ಕಟ್ಟಲಿದ್ದಾರೆ ಎಂದು ಹೇಳಲಾಗುತ್ತಿದೆ.
ದೀಪಾ ಜಯಕುಮಾರ್ ಹೇಳುವ ಪ್ರಕಾರ ‘ನನ್ನ ಮುಂದೆ ಎರಡು ಆಯ್ಕೆಗಳಿವೆ. ಎಐಎಡಿಎಂಕೆ ಪಕ್ಷ ಸೇರುವುದು ಅಥವಾ ಹೊಸ ಪಕ್ಷ ಕಟ್ಟುವುದು. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ’ ಎಂದು ಹೇಳಿದ್ದಾರೆ.
ರಾಜಕೀಯ ಪ್ರವೇಶಿಸುವಂತೆ ಯುವ ಪಡೆ ಒತ್ತಾಯಿಸಿದ್ದು, ರಾಜಕೀಯ ಪ್ರವೇಶದ ಯೋಜನೆ ಕುರಿತು ಎಐಎಡಿಎಂಕೆ ಸಂಸ್ಥಾಪಕರಾದ ಎಂಜಿಆರ್ ಅವರ 100ನೇ ಜನ್ಮದಿನಾಚರಣೆ ಸಂದರ್ಭ ಹೇಳಿದ್ದಾರೆ.
ಬೇರೆ ಯಾರನ್ನೂ ಜಯಲಲಿತಾ ಅವರ ಸ್ಥಾನಕ್ಕೆ ಸ್ವೀಕರಿಸಲು ಸಾಧ್ಯವಿಲ್ಲ, ಮುಂದಿನ ರಾಜಕೀಯ ನಡೆಯನ್ನು ಫೆ.24 ಜಯಲಲಿತಾ ಅವರ ಹುಟ್ಟು ಹಬ್ಬದಂದು ತಿಳಿಸುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ದೀಪಾ ಅವರ ರಾಜಕೀಯ ನಡೆ, ಶಶಿಕಲಾ ಮತ್ತು ಎಐಎಡಿಎಂಕೆ ಪಕ್ಷದ ಮೇಲೆ ಪ್ರಭಾವ ಬೀರಲಿದೆ.