ನೈಜೀರಿಯಾ: ಯುದ್ಧ ವಿಮಾನವೊಂದು ತನ್ನ ಯಡವಟ್ಟಿನಿಂದ ಉಗ್ರರ ಮೇಲೆ ಎಸೆಯಬೇಕಿದ್ದ ಬಾಂಬ್ ಅನ್ನು ತನ್ನದೇ ನಿರಾಶ್ರಿತರ ಶಿಬಿರದ ಮೇಲೆ ಎಸೆದಿದ್ದರಿಂದ ಹಲವಾರು ಜನರು ಗಾಯಗೊಂಡಿದ್ದು, 100ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದೆ.
ಬೋಕೋ ಹರಮ್ ಭಯೋತ್ಪಾದಕರ ವಿರುದ್ಧ ನೈಜೀರಿಯಾ ಯುದ್ಧ ಸಾರಿದ್ದು, ನೈಜೀರಿಯನ್ ಯುದ್ಧ ವಿಮಾನದ ಯಡವಟ್ಟಿನಿಂದ ಉಗ್ರರ ನೆ ಎಂದು, ಉಗ್ರರ ಮೇಲೆ ಎಸೆಯಬೇಕಿದ್ದ ಬಾಂಬ್ ಅನ್ನು ತನ್ನದೇ ನಿರಾಶ್ರಿತರ ಶಿಬಿರದ ಮೇಲೆ ಎಸೆದ ಘಟನೆ ನೈಜಿರಿಯಾದ ಬೋರ್ನ್ ರಾಜ್ಯದಲ್ಲಿ ನಡೆದಿದೆ.
ಬೋರ್ನ್ ರಾಜ್ಯದ ಸೇನಾ ಅಧಿಕಾರಿಗಳ ಪ್ರಕಾರ ಘಟನೆಯಲ್ಲಿ ಇಬ್ಬರು ಸೈನಿಕರು ಸೇರಿದಂತೆ 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಹಲವು ಜನರಿಗೆ ಗಾಯಗಳಾಗಿವೆ.