ಗುವಾಹಟಿ: ಅಸ್ಸಾಂ ರೈಫಲ್ಸ್ ರೆಜಿಮೆಂಟ್ ನ ಇಬ್ಬರು ಯೋಧರು ಶಂಕಿತ ಉಗ್ರರು ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ಗಡಿಯಲ್ಲಿ ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.
ಯೋಧರ ವಾಹನ ಹಾಗೂ 3 ಪ್ರವಾಸಿಗರ ವಾಹನಗಳ ಮೇಲೆ ಅಸ್ಸಾಂ ರಾಜ್ಯದ ತಿನ್ಸುಕಿಯಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ -53 ರಲ್ಲಿ ಉಗ್ರರು ಏಕಾಏಕಿ ಗ್ರೆನೇಡ್ ಗಳ ದಾಳಿ ನಡೆಸಿದ ಘಟನೆ ಭಾನುವಾರ ನಡೆದಿದೆ.
ಪ್ರಸ್ತುತ ಯೋಧರು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿಗಳು ನಡೆಯುತ್ತಿದ್ದು, ಅಸ್ಸಾಂ ರೈಫಲ್ಸ್ ರೆಜಿಮೆಂಟ್ ನ ಇಬ್ಬರು ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಉಗ್ರರನ್ನು ಸದೆಬಡಿಯಲು ಯೋಧರು ಕಾರ್ಯಾಚರಣೆಯನ್ನು ಆರಂಭಿಸಿದ್ದು, ಪ್ರಸ್ತುತ ಸ್ಥಳದ ಸುತ್ತಲೂ ಯೋಧರು ಸುತ್ತುವರೆದಿದ್ದು, ಹೆದ್ದಾರಿಯಲ್ಲಿ ಚಲಿಸುವ ಪ್ರವಾಸಿಗರನ್ನು ತಡೆಹಿಡಲಾಗಿದೆ ಎಂದು ರಕ್ಷಣಾ ವಕ್ತಾರ ಮಾಹಿತಿ ನೀಡಿದ್ದಾರೆ.