ಲಕ್ನೋ: ನಮ್ಮ ಪಕ್ಷ ದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾಗಿಂತಲೂ ಸುಂದರಿಯರಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯಸಭಾ ಸದಸ್ಯ, ಬಿಜೆಪಿ ಹಿರಿಯ ನಾಯಕ ವಿನಯ್ ಕಟಿಯಾರ್ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ರಾಜಕೀಯದಲ್ಲಿ ವಿವಾದವನ್ನು ಸೃಷ್ಟಿಸಿದ್ದಾರೆ.
ಬಜರಂಗದಳದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಇವರಿಗೆ 62 ವರ್ಷ ಪ್ರಾಯವಾಗಿದ್ದು, ಉತ್ತರ ಪ್ರದೇಶದ ಬಿಜೆಪಿ ಘಟಕದ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಟಾರ್ ಕ್ಯಾಂಪೇನರ್ಗಳ ಪಟ್ಟಿಯನ್ನು ಬಿಜೆಪಿಯೂ ಕೂಡ ಬಿಡುಗಡೆ ಮಾಡಿದ್ದು, ಇದರಲ್ಲಿ ಕಟಿಯಾರ್ ಹೆಸರು ನಮೂದಿಸಿಲ್ಲ.
ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸುವ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯ ಸಂದರ್ಶಕ ಪ್ರಶ್ನಿಸಿದಾಗ ಉತ್ತರ ನೀಡಿದ ಕಟಿಯಾರ್ “ಪ್ರಿಯಾಂಕಾ ಗಾಂಧಿ ಪ್ರಚಾರ ಮಾಡಿದರೆ ಏನಾಯ್ತು.. ಅವರಿಗಿಂತ ಸುಂದರಿಯರು ನಮ್ಮ ಪಕ್ಷದಲ್ಲಿಲ್ಲವೆ.. ಹಿರೋಹಿನ್ಗಳಿಲ್ಲವೆ.. ಸ್ಟಾರ್ ಕ್ಯಾಂಪೇನರ್ಗಳಿಲ್ಲವೆ..ಅವರೇನು ಅಂತಹಾ ಸುಂದರಿಯಲ್ಲ”ಎಂದು ವಿವಾದ ಹುಟ್ಟು ಹಾಕಿದ್ದಾರೆ.