ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುರೆಜ್ ಮತ್ತು ಸೊನ್ ಮಾರ್ಗ್ ವಲಯಗಳಲ್ಲಿನ ಸೇನಾ ಶಿಬಿರದ ಮೇಲೆ ಭಾರೀ ಹಿಮರಾಶಿ ಬಿದ್ದು ಕಣ್ಮರೆಯಾಗಿದ್ದ ಸೈನಿಕರ ಮೃತದೇಹ ಪತ್ತೆಯಾಗಿದೆ.
ನಿನ್ನೆ ಗುರೆಜ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ 10 ಮಂದಿ ಸೈನಿಕರ ಮೃತದೇಹಗಳು ಸಿಕ್ಕಿ 4 ಮಂದಿ ಕಣ್ಮರೆಯಾಗಿದ್ದರು. ಇಂದು ಆ 4 ಮಂದಿ ಯೋಧರ ಶವ ಪತ್ತೆಯಾಗಿದೆ. ನಿನ್ನೆ ಗುರೇಜ್ ಸೆಕ್ಟರ್ ನಲ್ಲಿ ಹಿಮಪಾತವಾಗಿದ್ದು, ಗಡಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿ ಕ್ಯಾಂಪ್ ಗೆ ವಾಪಸಾಗುತ್ತಿದ್ದ ಸಂದರ್ಭ ಯೋಧರು ನಾಪತ್ತೆಯಾಗಿದ್ದರು. ಒಟ್ಟು 14 ಮಂದಿ ಯೋಧರು ಹಿಮಪಾತದಲ್ಲಿ ಸಿಲುಕಿದ್ದು, ಬಳಿ 10 ಮಂದಿ ಸೈನಿಕರ ಮೃತದೇಹಗಳು ಸಿಕ್ಕಿ 4 ಮಂದಿ ಕಣ್ಮರೆಯಾಗಿದ್ದರು. ನಾಪತ್ತೆಯಾಗಿದ್ದ ನಾಲ್ವರು ಯೋಧರ ಮೃತದೇಹವು ಇದೀಗ ಪತ್ತೆಯಾಗಿದೆ.