ರಿಯಾದ್: ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ 39,000 ಪಾಕ್ ಪ್ರಜೆಗಳನ್ನು ವೀಸಾ ನಿಯಮ ಉಲ್ಲಂಘಿಸಿದ್ದಕ್ಕೆ ಸೌದಿ ಆರೇಬಿಯಾದ ಅಧಿಕಾರಿಗಳು ಗಡಿಪಾರು ಮಾಡಿದ ಘಟನೆ ನಡೆದಿದೆ.
ಉಗ್ರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಬಗ್ಗೆ ಪಾಕಿಸ್ತಾನದ ಕೆಲವರು ಸಹಾನುಭೂತಿ ಹೊಂದಿರುವ ಸಾಧ್ಯತೆಯಿದ್ದು, ಭದ್ರತಾ ಅಧಿಕಾರಿಗಳು ಅವರ ದಾಖಲೆ ಪರಿಶೀಲಿಸುವಂತೆ ಆದೇಶಿಸಿದ್ದು, ಬರೋಬ್ಬರಿ 39,000 ಪಾಕ್ ಪ್ರಜೆಗಳನ್ನು ಕಳೆದ ನಾಲ್ಕು ತಿಂಗಳಲ್ಲಿ ಅವರ ಸ್ವದೇಶಕ್ಕೆ ವಾಪಸ್ ಕಳುಹಿಸಿದ್ದಾರೆ. ಮಾತ್ರವಲ್ಲ ವೀಸಾ ನಿಯಮ ಉಲ್ಲಂಘಿಸಿ ದೇಶದಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಲಾಗಿದೆ.
ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ, ಕಳ್ಳತನ, ನಕಲು ಮತ್ತು ಹಲ್ಲೆಯಂತಹ ಪ್ರಕರಣಗಳಲ್ಲಿ ಪಾಕಿಸ್ತಾನಿಗಳು ಪಾಲುದಾರರಾಗಿದ್ದು, ಪಾಕಿಸ್ತಾನದ ಬಹುತೇಕ ಪ್ರಜೆಗಳು ಸಮಾಜಕ್ಕೆ ಭೀತಿಯೊಡ್ಡುವ ಇಸ್ಲಾಮಿಕ್ ಸ್ಟೇಟ್ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಎಂದು ಅರೇಬಿಯಾ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಅರೇಬಿಯಾ ಪಾಕಿಸ್ತಾನ ಸೇರಿದಂತೆ 5 ದೇಶಗಳ ನಾಗರೀಕರಿಗೆ ವೀಸಾ ನೀಡುವುದಿಲ್ಲವೆಂದು ಕೆಲ ದಿನಗಳ ಹಿಂದಷ್ಟೇ ಹೇಳಿತ್ತು, ಇದೀಗ 39,000 ಪಾಕ್ ಪ್ರಜೆಗಳನ್ನು ಗಡಿಪಾರು ಮಾಡಿದೆ.