ಚೆನ್ನೈ: ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಅವರಿಗೆ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಗುರುವಾರ ರಾಜ್ಯಪಾಲರು ಆಹ್ವಾನ ನೀಡಿದ್ದು, ಈ ಮೂಲಕ ತಮಿಳುನಾಡಿನಲ್ಲಿದ್ದ ರಾಜಕೀಯ ಅನಿಶ್ಚಿತತೆ ಪರಿಹಾರವಾಗುವ ಲಕ್ಷಣಗಳು ಕಂಡುಬರುತ್ತಿದೆ.
ಈ ಮೂಲಕ ಮುಖ್ಯಮಂತ್ರಿಯಾಗಬೇಕೆನ್ನುವ ಪನ್ನೀರ್ಸೆಲ್ವಂ ಅವರ ಆಸೆ ಕೊನೆಗೂ ಕನಸಾಗಿಯೇ ಉಳಿದಿದ್ದು, ಇದೀಗ ಪಳನಿಸ್ವಾಮಿ ಅವರನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದಾರೆ.
ರಾಜಭವನಕ್ಕೆ ಪಳನಿಸ್ವಾಮಿ ಭೇಟಿ ನೀಡಿದ್ದು, ರಾಜ್ಯಪಾಲರು ಒಪ್ಪಿಗೆ ನೀಡಿದರೆ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ.
ಪಳನಿಸ್ವಾಮಿಯವರು ತಮಗೆ 124 ಶಾಸಕರ ಬೆಂಬಲವಿರುವುದಾಗಿ ಹೇಳಿದ್ದು, 124 ಶಾಸಕರ ಬೆಂಬಲ ಇರುವ ಸಹಿ ಪತ್ರವನ್ನು ರಾಜ್ಯಪಾಲರಿಗೆ ಪಳನಿಸ್ವಾಮಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.