News Kannada
Wednesday, February 01 2023

ದೇಶ-ವಿದೇಶ

ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿರುವುದರಿಂದ ಅದಕ್ಕೆ ಉಗ್ರರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ: ಅಮೆರಿಕದ ಸಂಸದ ಬ್ರಾಡ್ ಶೇರ್ಮನ್

Photo Credit :

ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿರುವುದರಿಂದ ಅದಕ್ಕೆ ಉಗ್ರರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ: ಅಮೆರಿಕದ ಸಂಸದ ಬ್ರಾಡ್ ಶೇರ್ಮನ್

ವಾಷಿಂಗ್ಟನ್: ಪಾಕಿಸ್ತಾನಕ್ಕೆ ತಮ್ಮ ದೇಶದಲ್ಲಿನ ಉಗ್ರರ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ ಕಾರಣ ಅದು ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಗೇಮ್ ತಂತ್ರವನ್ನು ನಡೆಸುತ್ತಿದೆ ಎಂದು ಅಮೆರಿಕದ ಸಂಸದ ಬ್ರಾಡ್ ಶೇರ್ಮನ್ ಹೇಳಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿನ ಸೂಫಿ ದರ್ಗಾದ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಬಾಂಬ್ ದಾಳಿ ನಡೆಸಿದ್ದು 80 ಮಂದಿ ಸಾವಿಗೀಡಾಗಿದ್ದರು. ಉಗ್ರರ ಕೃತ್ಯವನ್ನು ಖಂಡಿಸಿ ಮಾತನಾಡಿದ ಶೇರ್ಮನ್ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ದೀರ್ಘಕಾಲದಿಂದ ಕೆಲವು ಉಗ್ರ ಸಂಘಟನೆಗಳನ್ನು ಪೋಷಿಸುತ್ತಾ ಕೆಲವು ಉಗ್ರ ಸಂಘಟನೆಗಳನ್ನು ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳುತ್ತಿದೆ

ಪಾಕಿಸ್ತಾನದ ಡಬಲ್ ಗೇಮ್ ಬುದ್ಧಿ ಇಂದು ಪಾಕಿಸ್ತಾನಕ್ಕೆ ಮುಳುವಾಗಿದ್ದು, ಹೀಗಾಗಿ ದೇಶದಲ್ಲಿ ನಡೆಯುವ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಪಾಕಿಸ್ತಾನ ತನ್ನ ಡಬಲ್ ಗೇಮ್ ತಂತ್ರವನ್ನು ಕೈಬಿಟ್ಟರೆ ಮಾತ್ರ ಉಗ್ರರ ವಿರುದ್ಧದ ಸಮರದಲ್ಲಿ ಜಯಿಸಲು ಸಾಧ್ಯ ಎಂದಿದ್ದಾರೆ. ಮಾತ್ರವಲ್ಲ ಐಎಸ್ಐ ಆಯ್ದ ಕೆಲವು ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

See also  ಮುಂದಿನ 2-3 ದಿನಗಳವರೆಗೆ ರಾತ್ರಿ 1 ರಿಂದ 3 ಸಮಯದಲ್ಲಿ ಯುಪಿಐ ಕೆಲಸ ಮಾಡುವುದಿಲ್ಲ: ಎನ್‌ಪಿಸಿಐ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು