ಚೆನ್ನೈ: ಪ್ರಸಿದ್ಧ ಅಂತಾರರಾಷ್ಟ್ರೀಯ ತಂಪು ಪಾನೀಯಗಳಾದ ಪೆಪ್ಸಿ ಮತ್ತು ಕೋಕಾ ಕೋಲಾ ಮಾರಾಟವನ್ನು ತಮಿಳುನಾಡು ಇಂದಿನಿಂದ ಸ್ಥಗಿತಗೊಳಿಸಿದೆ.
ವ್ಯಾಪಾರಿ ಸಂಘಟನೆಗಳು ಕೋಕ್ ಕೋಲಾ, ಪೆಪ್ಸಿ ಸೇರಿದಂತೆ ವಿದೇಶಿ ತಂಪು ಪಾನೀಯಗಳನ್ನು ಮಾರಾಟ ಮಾಡದಿರಲು ನಿರ್ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿದೇಶಿ ಪಾನೀಯಗಳ ವಿರುದ್ಧ ಈಗಾಗಲೇ ತಮಿಳುನಾಡಿನಲ್ಲಿ ಸಂದೇಶಗಳು ಹರಿದಾಡುತ್ತಿದ್ದರಿಂದ ಭಾರೀ ಪ್ರಮಾಣದಲ್ಲಿ ಪಾನೀಯಗಳ ಮಾರಾಟ ಕಡಿಮೆಯಾಗಿದೆ.
ತಮಿಳುನಾಡಿನಲ್ಲಿ ಪ್ರತಿದಿನ 10000 ಬಾಕ್ಸ್ ಪೆಪ್ಸಿ, ಕೋಕ್ ಸೇಲ್ ಆಗುತ್ತಿತ್ತು. ಇದೀಗ 5500 ಬಾಕ್ಸ್ ಮಾತ್ರ ಮಾರಾಟವಾಗುತ್ತಿದ್ದು, ಪೆಪ್ಸಿ ಕೋಕಾಕೋಲಾ ಮಾರಾಟ ಸ್ಥಗಿತಗೊಂಡಿರುವುದರಿಂದ ಗೃಹ ಉತ್ಪನ್ನ ಪಾನೀಯಗಳು ಹಾಗೂ ಎಳನೀರು ಸೇರಿದಂತೆ ನೈಸರ್ಗಿಕ ಪಾನೀಯಗಳ ಮಾರಾಟ ಜೋರಾಗಿ ನಡೆಯುತ್ತಿದೆ.