ವಾಷಿಂಗ್ ಟನ್: ಮಾಜಿ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ಹಾಗೂ ಒಬಾಮ ಅವರ ಸ್ನೇಹಿತ ‘ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮರಳಿ ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ’ ಎಂದು ಹೇಳಿದ್ದಾರೆ.
ಬರಾಕ್ ಒಬಾಮ ಕಳೆದ ವರ್ಷ ಎರಿಕ್ ಹೋಲ್ಡರ್ ಅವರಿಗೆ ನ್ಯಾಷನಲ್ ಡೆಮಾಕ್ರೆಟಿಕ್ ರೀಡಿಸ್ಟ್ರಿಕ್ಟಿಂಗ್ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಆಹ್ವಾನ ನೀಡಿದ್ದು, ಹೊಸ ಎನ್ ಡಿಆರ್ ಸಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಈಗ ರಾಜ್ಯ ಶಾಸಕರೊಂದಿಗೆ ಚರ್ಚೆ ನಡೆಸುವುದು ಮತ್ತು ದೇಣಿಗೆ ಸಂಗ್ರಹ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಮಾತ್ರವಲ್ಲ, ಬರಾಕ್ ಒಬಾಮ ಪುನಃ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಎರಿಕ್ ಹೋಲ್ಡರ್ ತಿಳಿಸಿದ್ದಾರೆ.