ಗಾಝಾ: ಗರ್ಭ ನಿರೋಧಕ ಹಾಗೂ ಕುಟುಂಬ ಯೋಜನೆಗಳ ಬಗ್ಗೆ ಅರಿವಿಲ್ಲದ ಮಹಿಳೆಯೊಬ್ಬರು 69 ಮಕ್ಕಳಿಗೆ ಜನ್ಮ ನೀಡಿ ತನ್ನ 40ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದ ಘಟನೆ ಪ್ಯಾಲಸ್ತೀನ್ ನ ಗಾಝಾದಿಂದ ವರದಿಯಾಗಿರುವ ಬಗ್ಗೆ ವೈರಲ್ ಆಗಿದೆ.
ಈ ಹಿಂದೆ ವಸಿಲೇವಾ ಎಂಬ ರಷ್ಯಾ ಮಹಿಳೆ 69 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಮಾಡಿದ್ದಳು. ಆಕೆ 16 ಅವಳಿ -ಜವಳಿ, 7 ಬಾರಿ ತ್ರಿವಳಿ ಮಕ್ಕಳು ಹಾಗೂ ನಾಲ್ಕು ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದಿದ್ದಳು. ಇಂಥಹುದೇ ಸುದ್ದಿ ಪ್ಯಾಲಸ್ತೀನ್ ನ ಗಾಝಾದಿಂದ ವರದಿಯಾಗಿರುವ ಬಗ್ಗೆ ವೈರಲ್ ಆಗಿದೆ. ಈ ನತದೃಷ್ಟೆ ಅತ್ಯಂತ ಫರ್ಟಿಲೈ ವುಮೆನ್ ಎಂಬ ಖ್ಯಾತಿಗೂ ಒಳಗಾಗಿದ್ದಾಳೆ. ಈಕೆ ಇಷ್ಟು ಸಣ್ಣ ವಯಸ್ಸಿಗೆ ಅಷ್ಟೊಂದು ಮಕ್ಕಳಿಗೆ ಹೇಗೆ ಜನ್ಮವಿತ್ತಳು ಎಂಬುದರ ಬಗ್ಗೆ ವಿವರವಾದ ಮಾಹಿತಿ ಲಭ್ಯವಾಗಿಲ್ಲ.