ಇಂಫಾಲ: ಉಕ್ಕಿನ ಮಹಿಳೆ ಇರೋಮ್ ಶರ್ವಿುಳಾ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಪರಾಭವಗೊಂಡ ಹಿನ್ನೆಲೆ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರದ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ಶರ್ವಿುಳಾ ತಿಳಿಸಿದ್ದಾರೆ.
ಶರ್ವಿುಳಾ ಥೌಬಲ್ ಕ್ಷೇತ್ರದಿಂದ ಸಿಎಂ ಮತ್ತು ಕಾಂಗ್ರೆಸ್ ಅಭ್ಯರ್ಥಿ ಓಕ್ರಮ್ ಇಬೋಬಿ ವಿರುದ್ಧ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದು, ಶರ್ವಿುಳಾ ಪರ ಚಲಾವಣೆಗೊಂಡ ಮತಗಳು ಕೇವಲ 90. ಇದರಿಂದ ಬೇಸರಗೊಂಡಿರುವ ಶರ್ವಿುಳಾ, ಮಣಿಪುರದ ಜನತೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ನನ್ನ ಸೋಲಿಗೆ ಜನರೇ ಕಾರಣ. ರಾಜಕೀಯದಿಂದ ಬೇಸತ್ತಿದ್ದೇನೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಮಾನ ಕೊಳಕಿನಿಂದ ಕೂಡಿವೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮಾನವ ಹಕ್ಕುಗಳ ಹೋರಾಟಗಾರ್ತಿ ಶರ್ವಿುಳಾ 16 ವರ್ಷಗಳ ಕಾಲ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ವಿರೋಧಿಸಿ ಉಪವಾಸ ಹೋರಾಟ ಮಾಡಿದ್ದು, 20 ಕಿ.ಮೀ. ದೂರವನ್ನು ಸೈಕಲ್ನಲ್ಲಿ ಕ್ರಮಿಸಿ ನಾಮಪತ್ರ ಸಲ್ಲಿಸಿದ್ದರು. ಜನತೆ ತನ್ನ ಹೋರಾಟವನ್ನು ಗಮನಿಸಿ ಮತ ಹಾಕುತ್ತಾರೆ ಎಂದೇ ನಂಬಿದ್ದ ಶರ್ಮಿಳಾ ರಾಜಕೀಯವಾಗಿ ಅಧಿಕಾರ ಪಡೆಯುವ ಮೂಲಕ ಎಫ್ಎಸ್ಪಿಎ ವಿರುದ್ಧ ಹೋರಾಟ ನಡೆಸಲು ಭಯಸಿದ್ದರು.