ಹೊಸದಿಲ್ಲಿ: ಭಾರತೀಯ ಮೂಲದ ಮಹಿಳೆಯೋರ್ವಳು ಪಾಕ್ ವ್ಯಕ್ತಿಯನ್ನು ಮದುವೆಯಾಗಿ ಆತನ ತಮ್ಮಂದಿರಿಂದ ಕಿರುಕುಳ ಅನುಭವಿಸುತ್ತಿದ್ದ ಆಕೆಯ ನೆರವಿಗೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಧಾವಿಸಿದ್ದು, ಶೀಘ್ರದಲ್ಲೇ ಭಾರತಕ್ಕೆ ಕರೆತರುವುದಾಗಿ ಮಹಿಳೆಯ ತಂದೆಗೆ ಭರವಸೆ ನೀಡಿದ್ದಾರೆ.
ಮೂಲಗಳ ಪ್ರಕಾರ ಹೈದರಾಬಾದ್ ಮೂಲದ ಮಹಿಳೆ ಮಹಮದೀಯ ಬೇಗಂ ಅವರಿಗೆ ಪಾಕ್ ಪತಿ ಯೂನಿಸ್ ಹಾಗೂ ಅತಮ ತಮ್ಮಂದಿರ ನಿತ್ಯ ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ಹಲವು ಬಾರಿ ಮಹಮದೀಯ ಬೇಗಂ ತನ್ನ ತಾಯಿ ಹಜಾರಾ ಬೇಗಂ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಯೂಟ್ಯೂಬ್ ಮೂಲಕ ವಿಡಿಯೋ ಸಂದೇಶ ರವಾನಿಸಿ ಸಹಾಯಕ್ಕಾಗಿ ಮೊರೆ ಇಟ್ಟಿದ್ದರು. ಅಕ್ಬರ್ ಅವರ ವಿಡಿಯೋ ನೋಡಿ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್ ಅವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಿ ಸಂತ್ರಸ್ತ ಮಹಿಳೆ ಮಹಮದೀಯ ಬೇಗಂ ಅವರ ಸ್ಥಿತಿಗತಿ ತಿಳಿಯುವಂತೆ ಸೂಚನೆ ನೀಡಿದ್ದಾರೆ.