ಲಂಡನ್: ವಿಮಾನದ ಮೂಲಕ ಅಮೆರಿಕ ಪ್ರವೇಶಿಸುವ ಪ್ರಯಾಣಿಕರು ಲ್ಯಾಪ್ಟ್ಯಾಪ್, ಐಪ್ಯಾಡ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದನ್ನು ನಿಷೇಧಿಸಿ, ಹೊಸ ಕಾನೂನು ಜಾರಿ ಮಾಡಿದೆ. ಇನ್ನು ಈ ಕಾನೂನು ಎಂಟು ರಾಷ್ಟ್ರಗಳಿಗೆ ಅನ್ವಯವಾಗಲಿದೆ.
ಜಗತ್ತಿನ ಅತ್ಯಂತ ಹೆಚ್ಚ ಪ್ರಯಾಣಿಕರು ಪ್ರಯಾಣಿಸುವ ಇಸ್ತಾಂಬುಲ್, ದುಬೈ, ದೋಹಾ ಮತ್ತು ಕತಾರ್ ಸೇರಿದಂತೆ 6 ಮುಸ್ಲಿಂ ರಾಷ್ಚ್ರಗಳ ಪ್ರಯಾಣಿಕರು ಮೊಬೈಲ್ ಗಿಂತ ದೊಡ್ಡದಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಿಮಾನದಲ್ಲಿ ಕೊಂಡೊಯ್ಯುವಂತಿಲ್ಲ ಎಂದು ಬ್ರಿಟನ್ ಸರ್ಕಾರ ಆದೇಶಿಸಿದೆ. ಈ ಆರು ದೇಶಗಳಿಂದ ಬ್ರಿಟನ್ ಗೆ ಆಗಮಿಸುವ ಯಾವುದೇ ಪ್ರಯಾಣಿಕರು ತಮ್ಮೊಂದಿಗೆ ಲ್ಯಾಪ್ ಟಾಪ್, ಐಪಾಡ್, ಕ್ಯಾಮೆರಾ ಸೇರಿದಂತೆ ವಿವಿಧ ರೀತಿಯ ಉಪಕರಣಗಳನ್ನು ವಿಮಾನದೊಳಗೆ ತರುವಂತಿಲ್ಲ ಎಂದು ಬ್ರಿಟನ್ ಸರ್ಕಾರ ನಿಷೇಧ ಹೇರಿದೆ.
ಅಮೆರಿಕಾಗೆ ನೇರವಾಗಿ ಪ್ರವೇಶಿಸುವ ಈಜಿಪ್ಟ್ನ ಕೈರೋ, ಜೋರ್ಡನ್ನ ಅಮನ್, ಕುವೈತ್ ನಗರ, ಮೊರಾಕೋ, ಕತರ್, ಸೌದಿ ಅರೇಬಿಯಾದ ಎರಡು ಪ್ರದೇಶ, ಟರ್ಕಿಯ ಇಸ್ತಾನ್ಬುಲ್ ಹಾಗೂ ಅಬು ಧಾಬಿ ಮತ್ತು ದುಬೈನಿಂದ ಐಪ್ಯಾಡ್ ಹಾಗೂ ಕ್ಯಾಮೆರಾದಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಇನ್ನು ಈ ನಿಯಮ ಮಂಗಳವಾರದಿಂದ ಜಾರಿಯಾಗಿದೆ ಎಂದು ಸರ್ಕಾರದ ವಕ್ತಾರ ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತ ಉತ್ತರ ಆಫ್ರಿಕಾ ಹಾಗೂ ಮಧ್ಯ ಪ್ರಾಚ್ಯದ ಎಂಟು ರಾಷ್ಟ್ರಗಳ ಪ್ರಯಾಣಿಕರಿಗೆ ಹೊಸ ನಿಯಂತ್ರಣ ನೀತಿಯನ್ನು ಪ್ರಕಟಿಸಿದೆ. ರಾಷ್ಟ್ರಗಳ ಹತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ನೇರವಾಗಿ ಅಮೆರಿಕ ಪ್ರವೇಶಿಸುವ ವಿಮಾನಗಳಲ್ಲಿ ಈ ನೀತಿ ಅನ್ವಯವಾಗಲಿದೆ ಎಂದು ಭದ್ರತಾ ಅಧಿಕಾರಿ ತಿಳಿಸಿದ್ದಾರೆ.